Free Bus Travel: ಉಚಿತ ಬಸ್ ಪ್ರಯಾಣ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಕಂಡಕ್ಟರ್ ನಡುವೆ ಜಗಳ ಖಚಿತ!
ಲಗ್ಗೇಜ್ ಹಣ ಕೊಡುವುದಾಗಿ ಹೇಳಿದರೂ ಬಸ್ ಹತ್ತಿಸಿಕೊಳ್ಳುತ್ತಿಲ್ಲ, ನಡುರಸ್ತೇಲಿ ಲಗ್ಗೇಜ್ ಬಿಸಾಕುವುದಾಗಿ ಹೆದರಿಸುತ್ತಿದ್ದಾರೆ ಎಂದು ಮಹಿಳೆ ಹೇಳುತ್ತಾಳೆ
ಬಾಗಲಕೋಟೆ: ಇನ್ನು ಮುಂದೆ ಈ ದೃಶ್ಯಗಳು ಸಾಮಾನ್ಯವೆನಿಸಲಿವೆ ಮಾರಾಯ್ರೇ. ಬಾಗಲಕೋಟೆ ಬಸ್ ನಿಲ್ದಾಣದಲ್ಲಿ ಕಂಡುಬಂದ ಸೀನ್ ಇದು. ಒಂದಿಬ್ಬರು ಮಹಿಳೆಯರು ಅತಿ ಎನಿಸುವಷ್ಟು ಸಾಮಾನು-ಸರಂಜಾಮು (luggage) ಬಸ್ ಹತ್ತುವ ಪ್ರಯತ್ನ ಮಾಡುತ್ತಿದ್ದಾಗ, ಕಂಡಕ್ಟರ್ (conductor) ಅವರನ್ನು ತಡೆದಿದ್ದಾರೆ. ಅಷ್ಷೆಲ್ಲ ಸಾಮಾನುಗಳನ್ನು ಬಸ್ ನೊಳಗೆ ಹಾಕಿದರೆ, ಬೇರೆ ಪ್ರಯಾಣಿಕರಿಗೆ (passengers) ಸಹಜವಾಗೇ ಸಮಸ್ಯೆ ಉಂಟಾಗುತ್ತದೆ. ಆದರೆ ಮಹಿಳೆಯ ವಾದ ಭಿನ್ನವಾಗಿದೆ. ಆಕೆ ಹೇಳೋದೇನೆಂದರೆ, ಇಲ್ಲಿಯವರೆಗೆ ಲಗೇಜ್ ಗೆ ಸಂಬಂಧಿಸಿದಂತೆ ಕಂಡಕ್ಟರ್ ಯಾವುದೇ ತಕರಾರು ಮಾಡುತ್ತಿರಲಿಲ್ಲ, ಆದರೆ ಉಚಿತ ಬಸ್ ಪ್ರಯಾಣ ಜಾರಿಗೊಂಡಿರುವ ಕಾರಣ ಹೀಗಾಡುತ್ತಿದ್ದಾರೆ, ಲಗ್ಗೇಜ್ ಹಣ ಕೊಡುವುದಾಗಿ ಹೇಳಿದರೂ ಬಸ್ ಹತ್ತಿಸಿಕೊಳ್ಳುತ್ತಿಲ್ಲ, ನಡುರಸ್ತೇಲಿ ಲಗ್ಗೇಜ್ ಬಿಸಾಕುವುದಾಗಿ ಹೆದರಿಸುತ್ತಿದ್ದಾರೆ ಅನ್ನುತ್ತಾಳೆ. ಮಹಿಳೆಯರು ಅಲೆಮಾರಿ ಸಮುದಾಯಕ್ಕೆ ಸೇರಿದವರಾಗಿರಬಹುದು. ಅವರು ಹೀಗೆ ಒಂದೂರಿಂದ ಮತ್ತೊಂದು ಊರಿಗೆ ಅಲೆಯುತ್ತಾ ಬದುಕು ನಡೆಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ