Chunchanakatte Falls: 40 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದೆ ಮೈಸೂರಿನ ಚುಂಚನಕಟ್ಟೆ ಜಲಪಾತ
ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದು, ಹಾರಾಂಗಿ ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆ ಚುಂಚನಕಟ್ಟೆ ಜಲಪಾತ ಹಾಲ್ನೊರೆಯಂತೆ ಧುಮ್ಮಿಕಿ ಹರಿಯುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಮೈಸೂರಿನ ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಕಳೆದ ಕೆಲ ದಿನಗಳಿಂದ ನೀರಿಲ್ಲದೆ ಜಲಪಾತ ಖಾಲಿಯಾಗಿತ್ತು. ಆದ್ರೆ ಇದೀಗ ಮಳೆಯಿಂದ ಮತ್ತೆ ಜಲಪಾತಕ್ಕೆ ಜೀವಕಳೆ ಬಂದಿದೆ. ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದು, ಹಾರಾಂಗಿ ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆ ಚುಂಚನಕಟ್ಟೆ ಜಲಪಾತ ಹಾಲ್ನೊರೆಯಂತೆ 40 ಅಡಿ ಎತ್ತರದಿಂದ ಧುಮ್ಮಿಕಿ ಹರಿಯುತ್ತಿದೆ. ಮೈಸೂರು ಪಟ್ಟಣದಿಂದ 57 ಕಿ.ಮೀ, ಕೆ.ಆರ್ ನಗರ ಪಟ್ಟಣದಿಂದ ಸುಮಾರು 16 ಕಿ.ಮೀ ದೂರದಲ್ಲಿ ಚುಂಚನಕಟ್ಟೆ ಜಲಪಾತವಿದೆ.