ಭಕ್ತಿಯ ಮಹಾಕುಂಭಕ್ಕೆ ಸಾಕ್ಷಿಯಾಗಿದ್ದೇನೆ; ಇಶಾ ಫೌಂಡೇಷನ್ ಮಹಾ ಶಿವರಾತ್ರಿಯಲ್ಲಿ ಅಮಿತ್ ಶಾ

Updated on: Feb 26, 2025 | 9:30 PM

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಯೋಗ ಕೇಂದ್ರದಲ್ಲಿ ಮಹಾ ಶಿವರಾತ್ರಿ ಆಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ನನ್ನ ಶುಭಾಶಯಗಳನ್ನು ಕೋರುತ್ತೇನೆ. ಸದ್ಗುರುಗಳ ಆಹ್ವಾನದ ಮೇರೆಗೆ ಇಲ್ಲಿಗೆ ಬರಲು ಅವಕಾಶ ಸಿಕ್ಕಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಮಹಾಶಿವರಾತ್ರಿ ಆಚರಣೆ ಅದ್ಭುತ ಮತ್ತು ವರ್ಣನಾತೀತ ಎಂದು ಅಮಿತ್ ಶಾ ಹೇಳಿದ್ದಾರೆ.

ಕೊಯಮತ್ತೂರು (ಫೆಬ್ರವರಿ 26): ‘ಇಂದು ಸೋಮನಾಥದಿಂದ ಕೇದಾರನಾಥದವರೆಗೆ, ಪಶುಪತಿನಾಥದಿಂದ ರಾಮೇಶ್ವರದವರೆಗೆ ಮತ್ತು ಕಾಶಿಯಿಂದ ಕೊಯಮತ್ತೂರಿನವರೆಗೆ ಇಡೀ ದೇಶವು ಶಿವನ ಸಾನ್ನಿಧ್ಯದಿಂದ ತುಂಬಿದೆ. ಇಂದು ಪ್ರಯಾಗರಾಜ್‌ನಲ್ಲಿ ಮಹಾ ಕುಂಭವು ಮುಕ್ತಾಯಗೊಳ್ಳುತ್ತಿದೆ. ಕೊಯಮತ್ತೂರಿನಲ್ಲಿ ಇಂದು ನಾನು ಭಕ್ತಿಯ ಮಹಾ ಕುಂಭಕ್ಕೆ ಸಾಕ್ಷಿಯಾಗುತ್ತಿದ್ದೇನೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ನನ್ನ ಶುಭಾಶಯಗಳನ್ನು ಕೋರುತ್ತೇನೆ. ಸದ್ಗುರುಗಳ ಆಹ್ವಾನದ ಮೇರೆಗೆ ಇಲ್ಲಿಗೆ ಬರಲು ಅವಕಾಶ ಸಿಕ್ಕಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಮಹಾಶಿವರಾತ್ರಿ ಆಚರಣೆ ಅದ್ಭುತ ಮತ್ತು ವರ್ಣನಾತೀತ. ವಿಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಒಟ್ಟಿಗೆ ತರುವ ಮೂಲಕ ಸದ್ಗುರು ಜಗ್ಗಿ ವಾಸುದೇವ್ ಧ್ಯಾನ ಮತ್ತು ಸಾಧನೆ ಮೂಢನಂಬಿಕೆಗಳಲ್ಲ, ಅವು ಸಂಪೂರ್ಣವಾಗಿ ವಿಜ್ಞಾನವನ್ನು ಆಧರಿಸಿವೆ ಎಂದು ಸಾಬೀತುಪಡಿಸಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಅವರು ಶಿವ ಶಾಶ್ವತ ಮತ್ತು ಪ್ರಜ್ಞೆ ಎಂದು ಎಲ್ಲರಿಗೂ ಅರಿತುಕೊಳ್ಳುವಂತೆ ಮಾಡಿದ್ದಾರೆ ‘ ಎಂದು ತಮಿಳುನಾಡಿನ ಕೊಯಮತ್ತೂರಿನ ಇಶಾ ಫೌಂಡೇಷನ್​ ನಲ್ಲಿ ನಡೆದ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ