ಗದಗ: ಚುನಾವಣಾ ಪ್ರಚಾರದಲ್ಲಿ ಕೂಲ್ ಡ್ರಿಂಕ್ಸ್ ಮಾರಾಟಕ್ಕೆ ಬಂದ ವ್ಯಾಪಾರಿಗೆ ಭಾರೀ ನಷ್ಟ; ಕಾರಣ ಏನು ಗೊತ್ತಾ?

|

Updated on: Apr 28, 2023 | 4:11 PM

ಗದಗದ ಲಕ್ಷ್ಮೇಶ್ವರದಲ್ಲಿ ಅಮಿತ್ ಶಾ ಅವರ ಪ್ರಚಾರ ಕಾರ್ಯಕ್ರಮಕ್ಕೆ ಬಂದ ಜನರು ಬಾಯಾರಿದ ಹಿನ್ನೆಲೆ ಗೊಂದಲಕ್ಕೊಳಗಾಗಿ ವ್ಯಾಪಾರಿಯೊಬ್ಬರು ಮಾರಾಟಕ್ಕೆಂದು ತಂದಿದ್ದ ತಂಪು ಪಾನೀಯದ ವ್ಯಾನ್ ಮೇಲೆ ಮುಗಿಬಿದ್ದು ಕೊಂಡೊಯ್ದ ಘಟನೆ ನಡೆದಿದೆ.

ಗದಗ: ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರ ಪ್ರಚಾರ ಕಾರ್ಯಕ್ರಮ ಹಿನ್ನೆಲೆ ಸುಡು ಬಿಸಿಲೆನ್ನದೆ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಆದರೆ ಬಿಸಿಲಿನ ಬೇಗೆಗೆ ಬೆಂದ ಜನರು ಬಾಯಾರಿಕೆಯಿಂದ ಬಳಲುತ್ತಿದ್ದರು. ಈ ವೇಳೆ ಒಂದು ತಂಪು ಪಾನೀಯ (Cool Drinks) ಮಾರಾಟದ ವ್ಯಾನ್ ಆಗಮಿಸಿದೆ. ಕಾರ್ಯಕ್ರಮಕ್ಕೆ ವ್ಯಾನ್ ಆಗಮಿಸುತ್ತಿದ್ದಂತೆ ವ್ಯಾನ್ ಮೇಲೆ ಮುಗಿಬಿದ್ದ ಜನರು ನೀರು, ಜ್ಯೂಸ್ ಕೊಂಡೊಯ್ದಿದ್ದಾರೆ. ನೀರಿನ ಬಾಟಲು ಕಿತ್ತಕೊಂಡು ಹೋಗಿದ್ದಕ್ಕೆ ಕಂಗಾಲಾದ ವ್ಯಾಪಾರಿ ಶರೀಫ್ ಕಣ್ಣೀರು ಹಾಕಿದ್ದಾರೆ. ಇಷ್ಟಕ್ಕೂ ಇಲ್ಲಿ ನಡೆದಿದ್ದೇನೆಂದರೆ, ಕಾರ್ಯಕ್ರಮ ಆಯೋಜಕರೇ ನೀರಿನ ವ್ಯವಸ್ಥೆ ಮಾಡಿದ್ದಾರೆಂದು ಭಾವಿಸಿ ಜನರು ವ್ಯಾನ್ ಮೇಲೆ ಮುಗಿಬಿದ್ದು ನೀರು, ಜ್ಯೂಸ್ ಕೊಂಡೊಯ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಜನರನ್ನ ಗಾಡಿಯಿಂದ ಕೆಳಗಿಸಿದರು.

ಇದನ್ನೂ ಓದಿ: ಮೋದಿಗೆ ಧಮ್ಕಿ ಹಾಕಿದಷ್ಟು ಅವರ ಪರ ಅಲೆ ಏಳಲಿದೆ: ಕಾಂಗ್ರೆಸ್ ವಿರುದ್ಧ ಗುಡುಗಿದ ಅಮಿತ್ ಶಾ

ಮತ್ತಷ್ಟು ವಿಡಿಯೋ ಸ್ಟೋರಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Fri, 28 April 23