‘ಹಲ್ಕಾ ಡಾನ್’ ಟೈಟಲ್ ಕೇಳಿ ನಟಿ ಅಮೃತಾ ಅಯ್ಯಂಗಾರ್ ಪ್ರತಿಕ್ರಿಯೆ ಏನು?

Updated on: Oct 24, 2025 | 8:21 PM

ಪ್ರಮೋದ್ ನಟನೆಯ ‘ಹಲ್ಕಾ ಡಾನ್’ ಚಿತ್ರ ಸೆಟ್ಟೇರಿದೆ. ಈ ಚಿತ್ರದಲ್ಲಿ ನಟಿ ಅಮೃತಾ ಅಯ್ಯಂಗಾರ್ ನಟಿಸುತ್ತಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಚಿತ್ರದ ಶೀರ್ಷಿಕೆ ಡಿಫರೆಂಟ್ ಆಗಿದೆ. ಛಲ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.

ಪ್ರಮೋದ್ ಅಭಿನಯದ ‘ಹಲ್ಕಾ ಡಾನ್’ (Halka Don) ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದಲ್ಲಿ ನಟಿ ಅಮೃತಾ ಅಯ್ಯಂಗಾರ್ ಅವರು ಅಭಿನಯಿಸುತ್ತಿದ್ದಾರೆ. ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಿನಿಮಾದ ಟೈಟಲ್ ಡಿಫರೆಂಟ್ ಆಗಿದೆ. ಛಲ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೆ.ಪಿ. ಶ್ರೀಕಾಂತ್ ಅವರು ಬಂಡವಾಳ ಹೂಡಿದ್ದಾರೆ. ‘ಮೊದಲು ನಾನು ಟೈಟಲ್ ಕೇಳಿರಲಿಲ್ಲ. ಬರೀ ಕಥೆ ಕೇಳಿದ್ದೆ. ಇದು ಟೈಟಲ್ ಅಂತ ತಿಳಿದಾಗ ವಾವ್ ಎನಿಸಿತು. ಮಾಸ್ ನಿರ್ಮಾಪಕರ ಜೊತೆ ನಾನು ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ’ ಎಂದು ಅಮೃತಾ ಅಯ್ಯಂಗಾರ್ (Amrutha Iyengar) ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.