ಉತ್ತರಾಧಿಕಾರಿ ಯುದ್ಧ: ಪುತ್ರ ಯತೀಂದ್ರ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಸಿಎಂ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಕುರಿತು ತಮ್ಮ ಪುತ್ರ ಡಾ.ಯತೀಂದ್ರ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಯತೀಂದ್ರ ಅವರು ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದು, ಸಿದ್ದರಾಮಯ್ಯ ನಂತರ ಇಂಥವರೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಅನಗತ್ಯ ಗೊಂದಲಗಳಿಗೆ ತೆರೆ ಎಳೆದರು.
ಬೆಂಗಳೂರು, ಅಕ್ಟೋಬರ್ 24: ಉತ್ತರಾಧಿಕಾರಿ ಬಗ್ಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ನಾನಾ ವಿಶ್ಲೇಷಣೆಯೂ ನಡೆಯುತ್ತಿದೆ. ಸದ್ಯ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ಈ ಹೇಳಿಕೆ ಬಗ್ಗೆ ಎಂಎಲ್ಸಿ ಡಾ.ಯತೀಂದ್ರ ಬಳಿಯೇ ಕೇಳಿದೆ. ಅದು ಸೈದ್ಧಾಂತಿಕವಾಗಿ ಮಾತ್ರ ಅಂತ ಹೇಳಿದ್ದಾರೆ. ಇಂಥವರೇ ಸಿಎಂ ಆಗಬೇಕು ಎಂದು ಡಾ.ಯತೀಂದ್ರ ಹೇಳಿಲ್ಲ. ತಿರುಚಿ ಏನಾದ್ರೂ ಹೇಳಿದ್ದಾರಾ ಎಂದು ಡಾ.ಯತೀಂದ್ರಗೆ ಕೇಳಿದೆ. ಇಲ್ಲ, ನಾನು ಸೈದ್ಧಾಂತಿಕವಾಗಿ ಮಾತಾಡಿದ್ದು ಎಂದಿದ್ದಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 24, 2025 10:31 PM
Latest Videos

