ಬಿಹಾರದಲ್ಲಿ ಅಮೃತಸರ-ಸಹರ್ಸಾ ಜನಸೇವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ
ಅಮೃತಸರದಿಂದ ಸಹರ್ಸಾಗೆ ಪ್ರಯಾಣಿಸುತ್ತಿದ್ದ ಜನಸೇವಾ ಎಕ್ಸ್‌ಪ್ರೆಸ್ ರೈಲಿಗೆ ಬಿಹಾರದ ಸೋನ್‌ಬರ್ಸಾ ಕಚಚಾರಿ ನಿಲ್ದಾಣದ ಬಳಿ ಬೆಂಕಿ ಹೊತ್ತಿಕೊಂಡಿದೆ. ರೈಲಿನ ಒಂದು ಕೋಚ್‌ನಿಂದ ಹೊಗೆ ಬರುತ್ತಿರುವುದು ಕಂಡುಬಂದಿದ್ದು, ಈ ಕೋಚ್ ರೈಲಿನಿಂದ ಬೇರ್ಪಟ್ಟಿದೆ. ಸಿಗರೇಟ್ ಅಥವಾ ಮೊಬೈಲ್ ಫೋನ್ ಸ್ಫೋಟದಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇನ್ನೂ ಕೆಲವು ವರದಿಗಳು ಬೆಂಕಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಸೂಚಿಸುತ್ತವೆ.
ನವದೆಹಲಿ, ಅಕ್ಟೋಬರ್ 24: ಇಂದು ಸಂಜೆ ಬಿಹಾರದ (Bihar) ಸೋನ್‌ಬರ್ಸಾ ಕಚಹರಿ ನಿಲ್ದಾಣದ ಬಳಿ ಅಮೃತಸರದಿಂದ ಸಹರ್ಸಾಗೆ ಪ್ರಯಾಣಿಸುತ್ತಿದ್ದ ಜನಸೇವಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಜನರಲ್ ಕಂಪಾರ್ಟ್‌ಮೆಂಟ್ ಕೋಚ್ ಒಂದರಿಂದ ಹೊಗೆ ಬರುತ್ತಿರುವುದು ಕಂಡುಬಂದ ತಕ್ಷಣ ಅಲರ್ಟ್ ಮಾಡಲಾಗಿದೆ. ಈ ಘಟನೆ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬೆಂಕಿ ಹೊತ್ತಿಕೊಂಡ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಲಾಗಿದೆ.
ಸಿಗರೇಟ್ ಅಥವಾ ಮೊಬೈಲ್ ಫೋನ್ ಸ್ಫೋಟದಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇನ್ನೂ ಕೆಲವು ವರದಿಗಳು ಬೆಂಕಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಸೂಚಿಸುತ್ತವೆ. ಬೆಂಕಿಯ ನಿಜವಾದ ಕಾರಣವನ್ನು ಕಂಡುಹಿಡಿಯಲು ವಿಧಿವಿಜ್ಞಾನ ತಂಡವು ಪರಿಶೀಲನೆ ನಡೆಸುತ್ತಿದೆ. ಈ ಘಟನೆಯ ನಂತರ ರೈಲು ಸಹರ್ಸಾ ನಿಲ್ದಾಣವನ್ನು ಸುರಕ್ಷಿತವಾಗಿ ತಲುಪಿತು. ಇದುವರೆಗೂ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಒಬ್ಬ ಪ್ರಯಾಣಿಕನಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

