Loading video

ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ

|

Updated on: Mar 25, 2025 | 1:44 PM

ಕರ್ನಾಟಕ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಸಚಿವರು, ಶಾಸಕರು ಮತ್ತು ಅವರ ಪುತ್ರರನ್ನು ಗುರಿಯಾಗಿಸಿ ಹನಿಟ್ರ್ಯಾಪ್ ನಡೆಸುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ನ್ಯಾಯಾಧೀಶರ ಮೇಲೂ ಇಂತಹ ಪ್ರಯತ್ನ ನಡೆದಿದೆ ಎಂಬ ವದಂತಿಗಳಿವೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜಕೀಯ ದ್ವೇಷದಿಂದ ಈ ಹನಿಟ್ರ್ಯಾಪ್ ನಡೆದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್​ ಸದ್ದು ಮಾಡುತ್ತಿದೆ. ರಾಜ್ಯದ ಸಚಿವರು, ಶಾಸಕರು ಮತ್ತು ಅವರ ಪುತ್ರರನ್ನು ಹನಿಟ್ರ್ಯಾಪ್ ಸುಳಿಯಲ್ಲಿ ಸಿಲುಕಿಸಲು ಯತ್ನಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಹಕಾರ ಸಚಿವ ಕೆ ಎನ್​ ರಾಜಣ್ಣ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಇನ್ನು, ನ್ಯಾಯಾಧೀಶರನ್ನೂ ಕೂಡ ಹನಿಟ್ರ್ಯಾಪ್​ ಸುಳಿಯಲ್ಲಿ ಸಿಲುಕಿಸುವ ಪ್ರಯತ್ನ ನಡೆದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ, ಸಚಿವ ಕೆ.ಎನ್​ ರಾಜಣ್ಣ ಪ್ರತಿಕ್ರಿಯಸಿದ್ದು, ನ್ಯಾಯಾಧೀಶರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ನಾನು ಹೇಳಿಲ್ಲ. ಸುಪ್ರೀಂಕೋರ್ಟ್​ನಲ್ಲಿ ಜಾರ್ಖಂಡ್ ಮೂಲದ ವ್ಯಕ್ತಿ PIL ಹಾಕಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ರಾಜಕಾರಣಿಗಳ ಮೇಲೆ ರಾಜಕೀಯ ದ್ವೇಷಕ್ಕಾಗಿ ಹನಿಟ್ರ್ಯಾಪ್ ಅಗಿದೆ ಎಂದು ಹೇಳಿದ್ದಾರೆ.

ಜಡ್ಜ್​​ಗಳ ಮೇಲೆ ಹನಿಟ್ರ್ಯಾಪ್ ಆಗಿದೆ ಅನ್ನೋದು ಸುಳ್ಳು ವದಂತಿ. ಹನಿಟ್ರ್ಯಾಪ್ ಬಗ್ಗೆ ಇಂದು ಗೃಹ ಸಚಿವರಿಗೆ ದೂರು ನೀಡುತ್ತೇನೆ. ಬ್ಯುಸಿ ಇದ್ದಿದ್ದರಿಂದ ಇಷ್ಟು ದಿವಸ ದೂರು ಬರೆಯಲು ಆಗಿರಲಿಲ್ಲ. ಇವತ್ತು ಬೆಳಗ್ಗೆ ನಾನೇ ಕುಳಿತು ವಿವರವಾಗಿ ದೂರು ಬರೆದಿದ್ದೇನೆ ಎಂದು ಹೇಳಿದರು.

Published on: Mar 25, 2025 01:07 PM