ಒಂದು ಆಟೋದಲ್ಲಿ 27 ಜನರನ್ನು ಸಾಗಿಸುತ್ತಿದ್ದ ಚಾಲಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಉತ್ತರ ಪ್ರದೇಶದಲ್ಲಿ! ವಿಡಿಯೋ ವೈರಲ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 11, 2022 | 11:07 AM

ಉತ್ತರ ಪ್ರದೇಶದ ಫತೆಪುರ್ ನಲ್ಲಿ ರವಿವಾರದಂದು ಆಟೋ ಚಾಲಕನೊಬ್ಬ ತನ್ನ ವಾಹನದಲ್ಲಿ ಮಕ್ಕಳು ಸೇರಿದಂತೆ ಒಟ್ಟು 27 ಜನರನ್ನು ಸಾಗಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಉತ್ತರ ಪ್ರದೇಶ: ಮಿನಿ ಬಸ್ಸೊಂದರಲ್ಲಿ ಸಾಗಿಸುವಷ್ಟು ಜನರನ್ನು ಒಂದೇ ಆಟೋನಲ್ಲಿ (auto rickshaw) ಸಾಗಿಸಬಹುದೆ? ತಮಾಷೆ ಮಾಡ್ತಿದ್ದೀರಾ ಅಂತ ಹೇಳಬೇಡಿ ಮಾರಾಯ್ರೇ. ಯಾಕೆಂದರೆ ಉತ್ತರ ಪ್ರದೇಶದ (Uttar Pradesh) ಫತೆಪುರ್ ನಲ್ಲಿ (Fatehpur) ರವಿವಾರದಂದು ಆಟೋ ಚಾಲಕನೊಬ್ಬ ತನ್ನ ವಾಹನದಲ್ಲಿ ಮಕ್ಕಳು ಸೇರಿದಂತೆ ಒಟ್ಟು 27 ಜನರನ್ನು ಸಾಗಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಟೋವನ್ನು ತಡೆದು ಅದರೊಳಗಿದ್ದವರನ್ನು ಪೊಲೀಸರು ಎಣಿಸುತ್ತಿರುವ ದೃಶ್ಯ ವೈರಲ್ ಆಗಿದೆ. ವಿಡಿಯೋ ನೋಡಿ ನೀವೂ ಎಂಜಾಯ್ ಮಾಡಿ.

ಇದನ್ನೂ ಓದಿ:  ಸಿದ್ದರಾಮಯ್ಯ, ಜಮೀರ್ ಹಣೆಗೆ ಕೇಸರಿ ಬೊಟ್ಟು ಹಚ್ಚಿದ ಪುರೋಹಿತರು; ವಿಡಿಯೋ ಇಲ್ಲಿದೆ