ಹಾವೇರಿ: ಕೆರೆಗೆ ಕೋಡಿ ಬಿದ್ದು ಜಲಪಾತದಂತೆ ಧುಮ್ಮುಕ್ಕುತ್ತಿರುವ ನೀರಲ್ಲಿ ಗ್ರಾಮಸ್ಥರಿಂದ ಮೀನು ಹಿಡಿಯುವ ಅಪಾಯಕಾರಿ ಪ್ರಯತ್ನ!
ಕೋಲುಗಳಿಗೆ ಬಲೆಗಳನ್ನು ಕಟ್ಟಿಕೊಂಡು ರಭಸದಿಂದ ಧುಮ್ಮಕ್ಕುತ್ತಿರುವ ನೀರಿನಲ್ಲಿ ಮೀನು ಸಿಗುವ ಮಾರು ಹಾಗಿರಲಿ, ಬಲೆಗಳೇ ಹರಿದುಹೋಗುವ ಜೊತೆ ಅವರು ಆಯತಪ್ಪಿ ಬೀಳುವ ಸಾಧ್ಯತೆ ಹೆಚ್ಚು.
ಹಾವೇರಿ: ಇದು ಹುಚ್ಚು ಮತ್ತು ವ್ಯರ್ಥ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ ಮಾರಾಯ್ರೇ. ಇಲ್ಲೇನಾಗಿದೆ ಅಂದರೆ, ಹಾವೇರಿ (Haveri) ಜಿಲ್ಲೆ ರಟ್ಟೀಹಳ್ಳಿ ತಾಲ್ಲೂಕಿನ ಮದಗಮಾಸೂರು ಕೆರೆಯ ಕೋಡಿ ಬಿದ್ದು ಜಪಪಾತದ (waterfalls) ಹಾಗೆ ಕೆಳಗೆ ಧುಮ್ಮಕ್ಕುತ್ತಿರುವ ನೀರಿನಲ್ಲಿ ಮೀನು ಹಿಡಿಯುವ ಹುಚ್ಚು ಸಾಹಸವನ್ನು ಕೆಲವಷ್ಟು ಜನ ಅಪಾಯಕಾರಿ ರೀತಿಯಲ್ಲಿ ಮಾಡುತ್ತಿದ್ದಾರೆ. ಅವರು ಕಲ್ಲುಬಂಡೆಗಳ (jittery rocks) ಮೇಲೆ ನಿಂತಿರುವುದನ್ನು ನೀವು ವಿಡಿಯೋನಲ್ಲಿ ನೋಡಬಹುದು. ಕೋಲುಗಳಿಗೆ ಬಲೆಗಳನ್ನು ಕಟ್ಟಿಕೊಂಡು ರಭಸದಿಂದ ಧುಮ್ಮಕ್ಕುತ್ತಿರುವ ನೀರಿನಲ್ಲಿ ಮೀನು ಸಿಗುವ ಮಾರು ಹಾಗಿರಲಿ, ಬಲೆಗಳೇ ಹರಿದುಹೋಗುವ ಜೊತೆ ಅವರು ಆಯತಪ್ಪಿ ಬೀಳುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: Viral Video: ಪುಣೆಯಲ್ಲಿ ನದಿಗೆ ಹಾರಿ ಪ್ರವಾಹದಿಂದ ವ್ಯಕ್ತಿಯನ್ನು ಕಾಪಾಡಿದ ಪೊಲೀಸ್; ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ
Latest Videos