ಜಮೀರ್ ಚಾಮರಾಜಪೇಟೆಯಿಂದ ಸತತವಾಗಿ ಆಯ್ಕೆಯಾಗುತ್ತಿರುವುದು ಬಿಜೆಪಿ ಆರೆಸ್ಸೆಸ್ ಗೆ ಸಹಿಸಲಾಗುತ್ತಿಲ್ಲ: ಮಾಜಿ ಕಾರ್ಪೊರೇಟರ್

ಜಮೀರ್ ಚಾಮರಾಜಪೇಟೆಯಿಂದ ಸತತವಾಗಿ ಆಯ್ಕೆಯಾಗುತ್ತಿರುವುದು ಬಿಜೆಪಿ ಆರೆಸ್ಸೆಸ್ ಗೆ ಸಹಿಸಲಾಗುತ್ತಿಲ್ಲ: ಮಾಜಿ ಕಾರ್ಪೊರೇಟರ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 11, 2022 | 2:20 PM

ಒಬ್ಬ ಅಲ್ಪಸಂಖ್ಯಾತ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಿರುವುದು ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಚುನಾವಣಾ ವರ್ಷದಲ್ಲಿ ವಿವಾದ ಸೃಷ್ಟಿಸುವುದು ಅವರ ಉದ್ದೇಶವಾಗಿದೆ ಎಂದು ಹೇಳಿದರು.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ (Chamarajpet) ಆಟದ ಮೈದಾನ ಆಟದ ಮೈದಾನವಾಗೇ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿ ನಾಗರಿಕರ ಒಕ್ಕೂಟವು ನಾಳೆ ಅಂದರೆ ಮಂಗಳವಾರ ಬಂದ್ ಗೆ ಕರೆ ಕೊಟ್ಟಿರುವುದು ಒಂದು ದುರುದ್ದೇಶ ಮತ್ತು ರಾಜಕೀಯ ಷಡ್ಯಂತ್ರದ (political conspiracy) ಭಾಗವೆಂದು ಆ ಭಾಗದ ಮಾಜಿ ಕಾರ್ಪೊರೇಟರ್ ಚಂದ್ರಶೇಖರ್ (Chandrashekar) ಹೇಳಿದ್ದಾರೆ. ಸೋಮವಾರ ತಮ್ಮ ಕಚೇರಿಯಲ್ಲಿ ಟಿವಿ9 ಕನ್ನಡ ವಾಹಿನಿಯ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಬಂದ್ ಗೆ ನಾಗರಿಕರ ಒಕ್ಕೂಟ ಕರೆ ನೀಡಿರುವುದು ನಿಜವಾದರೂ ಅದರ ಸೂತ್ರಧಾರಿಗಳು ಬಿಜೆಪಿ ಮತ್ತು ಆರೆಸ್ಸೆಸ್ ಎಂದರು.  ಒಬ್ಬ ಅಲ್ಪಸಂಖ್ಯಾತ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಿರುವುದು ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಚುನಾವಣಾ ವರ್ಷದಲ್ಲಿ ವಿವಾದ ಸೃಷ್ಟಿಸುವುದು ಅವರ ಉದ್ದೇಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:  Viral Video: ಹಲವು ಅಡಿಗಳಷ್ಟು ಎತ್ತರದಲ್ಲಿ ಕ್ರೇನ್​ನಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿ, ಮುಂದೇನಾಯ್ತು ಎಂದು ಈ ವಿಡಿಯೋ ನೋಡಿ