Online fraud in Mandya: ಕೇವಲ ರೂ. 2,700ಗಳಿಗೆ ಪ್ರತಿಷ್ಠಿತ ಕಂಪನಿಯ ಮೊಬೈಲ್ ಫೋನ್ ಕೊಂಡವನಿಗೆ ಸಿಕ್ಕಿದ್ದು ಡಬ್ಬಾ ಟಾರ್ಚ್!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 09, 2023 | 11:37 AM

2-3 ದಿನಗಳ ನಂತರ ಅವರಿಗೆ ಸಿಕ್ಕಿದ್ದು ಒಂದು ಡಬ್ಬ ಟಾರ್ಚ್, ಲೋಕಲ್ ಮೇಡ್ ಪವರ್ ಬ್ಯಾಂಕ್ ಮತ್ತು ಚಾರ್ಜ್ ಆಗದ ಬ್ಲ್ಯೂ ಟೂಥ್!

ಮಂಡ್ಯ: ಮೋಸ ಹೋಗುವವರು ಇರೋವರೆಗೆ ಮೋಸ ಮಾಡುವವರು ಸೃಷ್ಟಿಯಾಗುತ್ತಿರುತ್ತಾರೆ ಅಂತ ಹೇಳುತ್ತಾರೆ. ಅದರಲ್ಲೂ ಆನ್ಲೈನ್ ನಲ್ಲಿ ನಡೆಯುವ ವಂಚನೆಗಳಿಂದ (fraud) ಅಮಾಯಕರು ಕಂಗಾಲಾಗುತ್ತಿದ್ದಾರೆ. ಇಲ್ನೋಡಿ, ಮಂಡ್ಯದ ಅಟೋಚಾಲಕರೊಬ್ಬರು (auto rickshaw driver) ಕೇವಲ ರೂ. 2,700 ಗಳಿಗೆ ಒಂದು ಪ್ರತಿಷ್ಠಿತ ಕಂಪನಿಯ ಮೊಬೈಲ್ ಫೋನ್ (mobile phone), ಬ್ಲ್ಯೂ ಟೂಥ್ ಮತ್ತು ಒಂದು ಪವರ್ ಬ್ಯಾಂಕ್ ನಿಮ್ಮ ಹೆಸರಿಗೆ ಬಂದಿದೆ ಎಂದು ಮಹಿಳೆಯೊಬ್ಬಳು ತನ್ನ ಕೋಗಿಲೆ ತನ್ನ ಉಲಿದಿದ್ದಕ್ಕೆ ಅವಳ ಮಾತಿಗೆ ಮರುಳಾಗಿ, ಕಳಿಸಿ ಮೇಡಂ ಅಂದಿದ್ದಾರೆ. 2-3 ದಿನಗಳ ನಂತರ ಅವರಿಗೆ ಸಿಕ್ಕಿದ್ದು ಒಂದು ಡಬ್ಬ ಟಾರ್ಚ್, ಲೋಕಲ್ ಮೇಡ್ ಪವರ್ ಬ್ಯಾಂಕ್ ಮತ್ತು ಚಾರ್ಜ್ ಆಗದ ಬ್ಲ್ಯೂ ಟೂಥ್! ಆನ್ಲೈನ್ ವಂಚನೆಯಿಂದ ಹುಷಾರಾಗಿರಿ ಅಂತ ನಾವು ಎಚ್ಚರಿಸುತ್ತಲೇ ಇರುತ್ತೇವೆ, ಆದರೆ ನಮ್ಮ ಮಾತು ನಿಮ್ಮ ಕಿವಿಗೆ ಬೀಳುತ್ತಿಲ್ಲ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 

Published on: Jan 09, 2023 11:05 AM