Gavisiddeshwara: ಜನ.. ಜನ.. ಎಲ್ಲೆಲ್ಲೂ ಜನ..ಗವಿಸಿದ್ದೇಶ್ವರ ಅಜ್ಜನ ಜಾತ್ರೆಯಲ್ಲಿ ಸಾಗರದ ಅಲೆಗಳು ಉಕ್ಕಿದಂತೆ ಕಾಣ್ತಿರೋ ಭಕ್ತಗಣ: ವಿಡಿಯೋ ನೋಡಿ
ಲಕ್ಷಾಂತರ ಭಕ್ತರ ಮಹಾಸಂಗಮಕ್ಕೆ ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸಾಕ್ಷಿಯಾಗಿದೆ.
ಕೊಪ್ಪಳ: ಜಾತ್ರೆ ಅಂದ್ರೆ ಅಲ್ಲಿ ಜನ ಸೇರೋದು ಕಾಮನ್. ಆದರೆ ಇಲ್ಲಿ ಜನ ಸಾಗರ, ಅಲ್ಲಲ್ಲ ಜನ ಪ್ರವಾಹವೇ ಹರಿದು ಬಂದಿತ್ತು. ಲಕ್ಷಾಂತರ ಭಕ್ತರ ಮಹಾಸಂಗಮಕ್ಕೆ ಕೊಪ್ಪಳದ ಶ್ರೀಗವಿಸಿದ್ದೇಶ್ವರ (Koppal Gavisiddeshwara) ಜಾತ್ರಾ ಮಹೋತ್ಸವ ಸಾಕ್ಷಿಯಾಗಿದೆ. ದಕ್ಷಿಣ ಭಾರತದ ಕುಂಭಮೇಳದಲ್ಲಿ, ಜನರ ಸುನಾಮಿಯೇ ಎದ್ದಂತೆ ಕಾಣುತ್ತಿತ್ತು. ಕಳೆದ ಎರಡು ವರ್ಷದಿಂದ ಕೊರೊನಾದಿಂದಾಗಿ ಗವಿಸಿದ್ದೇಶ್ವರನ ಜಾತ್ರೆ ಕಳೆಗುಂದಿತ್ತು. ಆದರೆ ಈ ಸಲ ವೈಭವದಿಂದ ಜಾತ್ರೆ ನಡೆಯಿತು. ಬೆಳಗ್ಗೆಯಿಂದಲೇ ರಾಜ್ಯದ ನಾನಾ ಜಿಲ್ಲೆಗಳಿಂದ, ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos