ರೈಲಿನಲ್ಲಿ ಸಿಗರೇಟು ಸೇದಿದ್ದನ್ನು ಪ್ರಶ್ನಿಸಿದ ತನ್ನ ತಂದೆ ವಯಸ್ಸಿನ ಪ್ರಯಾಣಿಕರೊಂದಿಗೆ ಜಗಳಕ್ಕಿಳಿದ ಯುವಕ ನಂತರ ತೆಪ್ಪಗಾದ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 13, 2023 | 11:13 AM

ಆದರೆ, ಇನ್ನಷ್ಟು ಪ್ರಯಾಣಿಕರು ರೇಗಲು ಆರಂಭಿಸಿದಾಗ, ಸಿಗರೇಟು ಬಿಸಾಡಿ ಬಾಯಿ ಮುಚ್ಚಿಕೊಳ್ಳುತ್ತಾನೆ. ವಿಡಿಯೋವನ್ನು ಪೋಷಕರು, ಪಾಲಕರು ನೋಡಿದರೆ ಅವರಿಗೇನು ಉತ್ತರ ಕೊಡುತ್ತಾನೋ ಈ ಮೂರ್ಖ ಪುಂಡ?

ಯುವಜನಾಂಗವನ್ನು ಪ್ರತಿನಿಧಿಸುವ ಯುವಕನ (young man) ಪುಂಡಾಟ ನೋಡಿ ಹೇಗಿದೆ. ಬೆಂಗಳೂರಿನಿಂದ ಬೆಳಗಾವಿ (Bengaluru-Belagavi) ಕಡೆ ಹೊರಟಿದ್ದ ಟ್ರೈನೊಂದರಲ್ಲಿ ಇವನು ಬಿಂದಾಸಾಗಿ ಸಿಗರೇಟು (cigarette) ಸೇದಲಾರಂಭಿಸಿದಾಗ ಸಹಪ್ರಯಾಣಿಕರು ಆಕ್ಷೇಪಿಸಿದ್ದಾರೆ. ಅವನ ತಲೆಯಲ್ಲಿ ಕಿಂಚಿತ್ತಾದರೂ ಮೆದುಳಿದ್ದಿದ್ದರೆ ಕೂಡಲೇ ಸಿಗರೇಟು ಬಿಸಾಡಿ ತಪ್ಪಾಯ್ತು ಅಂತ ಅವರ ಕ್ಷಮೆ ಕೇಳಬೇಕಿತ್ತು. ಆದರೆ ಈ ಈಡಿಯಟ್ ತನ್ನ ತಂದೆ ವಯಸ್ಸಿನ ವ್ಯಕ್ತಿಯೊಬ್ಬರು ಹಾಗೂ ಇತರ ಪ್ರಯಾಣಿಕರೊಂದಿಗೆ ಮೊಂಡುವಾದ ಶುರುಮಾಡುತ್ತಾನೆ. ಆದರೆ, ಇನ್ನಷ್ಟು ಪ್ರಯಾಣಿಕರು ರೇಗಲು ಆರಂಭಿಸಿದಾಗ, ಸಿಗರೇಟು ಬಿಸಾಡಿ ಬಾಯಿ ಮುಚ್ಚಿಕೊಳ್ಳುತ್ತಾನೆ. ವಿಡಿಯೋವನ್ನು ಪೋಷಕರು, ಪಾಲಕರು ನೋಡಿದರೆ ಅವರಿಗೇನು ಉತ್ತರ ಕೊಡುತ್ತಾನೋ ಈ ಮೂರ್ಖ ಪುಂಡ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ