Message from Netherlands: ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಅನಿವಾಸಿ ಭಾರತೀಯರೊಬ್ಬರಿಂದ ಸಿದ್ದರಾಮಯ್ಯಗೆ ಮನವಿ

Edited By:

Updated on: Jan 11, 2023 | 12:45 PM

ಸಿದ್ದರಾಮಯ್ಯ ಬಾದಾಮಿಯ ಶಾಸಕರಾದ ನಂತರ ಕ್ಷೇತ್ರವೂ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ ಎಂದು ಅಶೋಕ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಾದಾಮಿ ಹೊರತಾದ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆಯನ್ನುಂಟು ಮಾಡಿದೆ. ಈಗ ಯುರೋಪಿನ ನೆದರ್ಲ್ಯಾಂಡ್ಸ್ ನಲ್ಲಿ ಉದ್ಯಮಿಯಾಗಿರುವ ಬಾದಾಮಿಯ ಸಾಫ್ಟ್ ಇಂಜಿನೀಯರ್ ಅಶೋಕ್ ಹಟ್ಟಿ (Ashok Hatti) ಅವರು ವಿಡಿಯೋ ಸಂದೇಶದ ಮೂಲಕ ಬಾದಾಮಿಯಿಂದಲೇ ಸಿದ್ದರಾಮಯ್ಯ ಸ್ಪರ್ಧಿಬೇಕೆಂದು ಆಗ್ರಹಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳನ್ನು ಆಧುನಿಕ ಇಮ್ಮಡಿ ಪುಲಿಕೇಶಿ (Immadi Pulikeshi) ಎಂದು ಉಲ್ಲೇಖಿಸುವ ಅಶೋಕ್ ಅವರು ಸಿದ್ದರಾಮಯ್ಯ ಬಾದಾಮಿಯ ಶಾಸಕರಾದ ನಂತರ ಕ್ಷೇತ್ರವೂ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ