ಬೆಂಗಳೂರು: ತಮ್ಮ ಕಚೇರಿಗೆ ಬರುವವರನ್ನೆಲ್ಲ ಪೊಲೀಸ್ ಸರ್ಟಿಫಿಕೇಟ್ ತೆಗೆದುಕೊಂಡು ಬನ್ನಿ ಅಂತ ಹೇಳಲಾಗಲ್ಲ, ಅನೇಕ ಜನ ಬರ್ತಾರೆ ಫೋಟೋ ತೆಗೆಸಿಕೊಳ್ಳುತ್ತಾರೆ, ಅವರ ಹಿನ್ನೆಲೆಯನ್ನು ಕೇಳಲಾಗದು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದರು. ವಿಕಾಸ ಸೌಧದಲ್ಲಿ (Vikasa Soudha) ಸುದ್ದಿಗಾರರೊಂದಿಗೆ ಮಾತಾಡಿದ ಸಚಿವರು, ಸ್ಯಾಂಟ್ರೋ ರವಿ (Santro Ravi) ಸೆರೆಸಿಕ್ಕ ನಂತರ ನಡೆಯುವ ವಿಚಾರಣೆಯಲ್ಲಿ ಹೊರಬೀಳುವ ಹೆಸರುಗಳು ಯಾರೇ ಆಗಿರಲಿ, ಅವವ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಸಚಿವ ಜ್ಞಾನೇಂದ್ರ ಹೇಳಿದರು. ಹಲವಾರು ಪೊಲೀಸ್ ತಂಡಗಳು ರವಿಯ ಬೇಟೆಯಾಡುತ್ತಿವೆ ಎಂದು ಹೇಳಿದ ಅವರು ಅವನೆಲ್ಲೇ ಅಡಗಿ ಕುಳಿತಿದ್ರೂ ಎಳೆದು ತರಲಾಗುತ್ತದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ