‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು

Edited By:

Updated on: Mar 17, 2025 | 2:21 PM

ಆ್ಯಂಕರ್ ಅನುಶ್ರೀ ಅವರು ಪುನೀತ್ ರಾಜ್​ಕುಮಾರ್ ಅವರ ದೊಡ್ಡ ಅಭಿಮಾನಿ. ಅವರು ಇಂದು ನಮ್ಮ ಜೊತೆ ಇಲ್ಲದಿದ್ದರೂ ಬರ್ತ್​ಡೇನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪುನೀತ್ ರಾಜ್​ಕುಮಾರ್ ಬಗ್ಗೆ ಅನುಶ್ರೀ ಅವರು ಮಾತನಾಡಿದ್ದಾರೆ. ‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’ ಎಂದು ಅನುಶ್ರೀ ಅವರು ಹೇಳಿಕೊಂಡಿದ್ದಾರೆ .

ಪುನೀತ್ ರಾಜ್​ಕುಮಾರ್ ಸಮಾಧಿ ಬಳಿ ಅಪಾರ ಅಭಿಮಾನಿಗಳು ನೆರೆದಿದ್ದಾರೆ. ಈ ಪೈಕಿ ಅನುಶ್ರೀ ಕೂಡ ಒಬ್ಬರು. ಅವರು ಪುನೀತ್​ನ ದೊಡ್ಡ ಅಭಿಮಾನಿ. ಪುನೀತ್ ರಾಜ್​ಕುಮಾರ್ ಬಗ್ಗೆ ಮಾತನಾಡಿದ ಅವರು, ‘ಕೋಟ್ಯಂತರ ಅಭಿಮಾನಿಗಳಲ್ಲಿ ನನ್ನನ್ನು ಗುರುತಿಸುತ್ತಿದ್ದಾರೆ. ಅವರ ಜನ್ಮದಿನಕ್ಕೆ ಕೇಕ್ ಕಟ್ ಮಾಡಿಸಿದ್ದೇನೆ. ಆ ಗುಣಕ್ಕೆ ಅಭಿಮಾನಿ. ಅದು ಅನ್ನ ಹಾಕಿದ ಕೈ. ಅವರಿಗೆ ಕೊಟ್ಟು ಅಭ್ಯಾಸವೇ ಹೊರತು, ತೆಗೆದುಕೊಂಡು ಅಭ್ಯಾಸ ಇಲ್ಲ’ ಎಂದಿದ್ದಾರೆ ಅನುಶ್ರೀ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Mar 17, 2025 02:18 PM
Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More