AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದ ಬಸ್​ನೊಳಗೇ ಹೊಡೆದಾಡಿಕೊಂಡ ಮಹಿಳೆಯರು; ವಿಡಿಯೋ ವೈರಲ್

ಆಂಧ್ರದ ಬಸ್​ನೊಳಗೇ ಹೊಡೆದಾಡಿಕೊಂಡ ಮಹಿಳೆಯರು; ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on: Sep 15, 2025 | 4:11 PM

Share

ಆಂಧ್ರಪ್ರದೇಶದ ಬಸ್ ವಾಗ್ವಾದ ಹಿಂಸಾತ್ಮಕ ಜಗಳಕ್ಕೆ ತಿರುಗಿತು. ಬಳಿಕ ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡರು. ಈ ವಿಡಿಯೋ ವೈರಲ್ ಆಗಿದೆ. ಆಂಧ್ರಪ್ರದೇಶದ ಬಸ್‌ನಲ್ಲಿ ನಡೆದ ಬಿಸಿ ವಾಗ್ವಾದವು ಹಿಂಸಾತ್ಮಕ ಜಗಳಕ್ಕೆ ತಿರುಗಿತು. ಕ್ಯಾಮೆರಾದಲ್ಲಿ ಸೆರೆಯಾದ ಈ ನಾಟಕೀಯ ಘಟನೆಯಲ್ಲಿ ಬಸ್‌ನೊಳಗೆ ಮಹಿಳೆಯರು ಜಗಳವಾಡುತ್ತಿರುವುದನ್ನು ನೋಡಬಹುದು.

ಹೈದರಾಬಾದ್, ಸೆಪ್ಟೆಂಬರ್ 15: ಆಂಧ್ರಪ್ರದೇಶದ (Andhra Praesh) ಬಸ್​​ನಲ್ಲಿ ನಡೆದ ಮಹಿಳೆಯರ ನಡುವಿನ ಜಗಳ ಹೊಡೆದಾಟದ ಮಟ್ಟಕ್ಕೆ ಹೋದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ (Video Viral) ಕಂಡುಬರುವ ಮಹಿಳೆಯರಲ್ಲಿ ಒಬ್ಬರಿಗೆ ವಯಸ್ಸಾಗಿತ್ತು. ಅವರು ಮೊದಲಿಗೆ ಜಗಳವಾಡುವುದನ್ನು ಕಾಣಬಹುದು. ಆದರೆ, ಕೆಲವು ಕ್ಷಣಗಳ ನಂತರ ಸಲ್ವಾರ್ ಧರಿಸಿದ ಮಹಿಳೆಯೊಬ್ಬರು ವೃದ್ಧ ಮಹಿಳೆಗೆ ಹೊಡೆದರು. ಅದಕ್ಕೆ ಪ್ರತಿಯಾಗಿ ಆ ವೃದ್ಧೆ ನೀರಿನ ಬಾಟಲಿಯಿಂದ ಆಕೆಗೆ ವಾಪಾಸ್ ಹೊಡೆದರು. ಬಳಿಕ ಇಬ್ಬರ ನಡುವೆ ಹೊಡೆದಾಟ ನಡೆಯಿತು. ಈ ಘಟನೆ ಎನ್‌ಟಿಆರ್ ಜಿಲ್ಲೆಯ ಪೆನುಗಂಚಿಪ್ರೊಲು ನಡುವೆ ವಿಜಯವಾಡಕ್ಕೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ