ಡಿವೈಡರ್​​ಗೆ ಗುದ್ದಿದ ಸಾರಿಗೆ ಬಸ್​​: ಅಪಘಾತದ ತೀವ್ರತೆಗೆ ಕಿತ್ತು ಬಂದ ಎಂಜಿನ್​​, ಮುಂಬದಿ ಚಕ್ರಗಳು!

Edited By:

Updated on: Apr 02, 2026 | 11:26 AM

ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಮುಂಜಾನೆ ಆಂಧ್ರ ಸಾರಿಗೆ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಧೋನಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ವೇಗವಾಗಿ ಡಿಕ್ಕಿ ಹೊಡೆದ ರಭಸಕ್ಕೆ ಮುಂಭಾಗದ ಚಕ್ರ ಮತ್ತು ಇಂಜಿನ್ ಕಿತ್ತುಬಂದಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೈಗ್ರೌಂಡ್ಸ್ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು, ಏಪ್ರಿಲ್​​ 02: ವೇಗವಾಗಿ ಬಂದ ಆಂಧ್ರ ಸಾರಿಗೆ ಬಸ್ (Bus) ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಶಿವಾನಂದ ಸರ್ಕಲ್ ಬಳಿ ಇಂದು ಮುಂಜಾನೆ ನಡೆದಿದೆ. ಅಧೋನಿಯಿಂದ ಅನಂತಪುರ ಮೂಲಕ ಬೆಂಗಳೂರಿಗೆ ಬರ್ತಿದ್ದ ಬಸ್​​ ಡಿವೈಡರ್​ಗೆ ಡಿಕ್ಕಿಯಾದ ರಭಸಕ್ಕೆ ಮುಂಭಾಗದ ಚಕ್ರ ಮತ್ತು ಇಂಜಿನ್ ಕಿತ್ತು ಬಂದಿದೆ. ಬಸ್​​ನಲ್ಲಿರುವ ಪ್ರಯಾಣಿಕರೆಲ್ಲವೂ ಸುರಕ್ಷಿತವಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಹೈಗ್ರೌಂಡ್ಸ್ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

 

 

Loading...
Unable to load recommendations.
Follow Us
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More