Android iPhone Theme: ಆ್ಯಂಡ್ರಾಯ್ಡ್ ಫೋನ್​ನಲ್ಲೇ ಸಿಗುತ್ತದೆ ಐಫೋನ್ ಬಳಸಿದ ಅನುಭವ

Android iPhone Theme: ಆ್ಯಂಡ್ರಾಯ್ಡ್ ಫೋನ್​ನಲ್ಲೇ ಸಿಗುತ್ತದೆ ಐಫೋನ್ ಬಳಸಿದ ಅನುಭವ

ಕಿರಣ್​ ಐಜಿ
|

Updated on: Mar 03, 2024 | 7:46 AM

ನಿಮ್ಮಿಷ್ಟದ ಥೀಮ್ ಬಳಸಲು ಕೂಡ ಸಾಧ್ಯವಾಗುವುದಿಲ್ಲ. ಆದರೆ ಆ್ಯಂಡ್ರಾಯ್ಡ್ ಫೋನ್​ನಲ್ಲೇ ಐಫೋನ್ ಬಳಕೆಯ ಅನುಭವ ಪಡೆಯಬಹುದು. ಐಫೋನ್ ಐಕಾನ್, ಆ್ಯಪ್ ಡಿಸೈನ್ ನಿಮ್ಮ ಆ್ಯಂಡ್ರಾಯ್ಡ್ ಫೋನ್​ನಲ್ಲೂ ಲಭ್ಯವಾಗುತ್ತದೆ. ಯಾವುದೇ ಖರ್ಚಿಲ್ಲದೇ, ಸುಲಭದಲ್ಲಿ ಐಫೋನ್ ಅನುಭವ ಪಡೆಯಲು ಈ ಸಿಂಪಲ್ ಟ್ರಿಕ್ಸ್ ನಿಮಗೆ ಸಹಕಾರಿಯಾಗಬಹುದು.

ಐಫೋನ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಆದರೆ ಕೆಲವರು ಆ್ಯಂಡ್ರಾಯ್ಡ್ ಫೋನ್​ ಅನ್ನೇ ಇಷ್ಟಪಡುತ್ತಾರೆ. ಆ್ಯಂಡ್ರಾಯ್ಡ್ ಫೋನ್​ನಲ್ಲಿ ಇರುವಷ್ಟು ಕಸ್ಟಮೈಸೇಶನ್ ಮತ್ತು ಥೀಮ್ ಆಯ್ಕೆಗಳು ಐಫೋನ್​ನಲ್ಲಿ ದೊರೆಯುವುದಿಲ್ಲ. ಅಲ್ಲದೇ, ನಿಮ್ಮಿಷ್ಟದ ಥೀಮ್ ಬಳಸಲು ಕೂಡ ಸಾಧ್ಯವಾಗುವುದಿಲ್ಲ. ಆದರೆ ಆ್ಯಂಡ್ರಾಯ್ಡ್ ಫೋನ್​ನಲ್ಲೇ ಐಫೋನ್ ಬಳಕೆಯ ಅನುಭವ ಪಡೆಯಬಹುದು. ಐಫೋನ್ ಐಕಾನ್, ಆ್ಯಪ್ ಡಿಸೈನ್ ನಿಮ್ಮ ಆ್ಯಂಡ್ರಾಯ್ಡ್ ಫೋನ್​ನಲ್ಲೂ ಲಭ್ಯವಾಗುತ್ತದೆ. ಯಾವುದೇ ಖರ್ಚಿಲ್ಲದೇ, ಸುಲಭದಲ್ಲಿ ಐಫೋನ್ ಅನುಭವ ಪಡೆಯಲು ಈ ಸಿಂಪಲ್ ಟ್ರಿಕ್ಸ್ ನಿಮಗೆ ಸಹಕಾರಿಯಾಗಬಹುದು.