Voters fume: ಚಿಕ್ಕಮಗಳೂರು ಶಾಸಕ ಸಿಟಿ ರವಿ ನೀಡಿದ ಸೇರೆಗಳನ್ನು ಸುಟ್ಟುಹಾಕಿದ ಕ್ಷೇತ್ರದ ಗ್ರಾಮಸ್ಥರು
ಬಿಜೆಪಿ ಶಾಸಕ ಸಿಟಿ ರವಿ ಅವರ ಬೆಂಬಲಿಗರು ಕ್ಷೇತ್ರದ ಭಕ್ತರಹಳ್ಳಿ ಮತ್ತು ಮಲ್ಲೇನಹಳ್ಳಿಯಲ್ಲಿ ಯುಗಾದಿ ಹಬ್ಬಕ್ಕೆ ಗಿಫ್ಟ್ ರೂಪದಲ್ಲಿ ಮತದಾರರಿಗೆ ಸೀರೆಗಳನ್ನು ಹಂಚಿದ್ದಾರೆ.
ಚಿಕ್ಕಮಗಳೂರು: ಮುಂಚಿನ ಹಾಗೆ ಚುನಾವಣೆ ಸಮಯದಲ್ಲಿ ಮತದಾರರಿಗೆ ಸೀರೆ, ಪಂಚೆ, ಕುಕ್ಕರ್, ಮಿಕ್ಸರ್ ಗ್ರೈಂಡರ್ ಮೊದಲಾದವುಗಳನ್ನು ಕೊಟ್ಟು ಯಾಮಾರಿಸುವುದು ಸಾಧ್ಯವಿಲ್ಲ. ಬಿಜೆಪಿ ಶಾಸಕ ಸಿಟಿ ರವಿ (CT Ravi) ಅವರ ಬೆಂಬಲಿಗರು ಕ್ಷೇತ್ರದ ಭಕ್ತರಹಳ್ಳಿ (Bhaktharahalli) ಮತ್ತು ಮಲ್ಲೇನಹಳ್ಳಿಯಲ್ಲಿ (Mallenahalli) ಯುಗಾದಿ ಹಬ್ಬಕ್ಕೆ ಗಿಫ್ಟ್ ರೂಪದಲ್ಲಿ ಮತದಾರರಿಗೆ ಸೀರೆಗಳನ್ನು ಹಂಚಿದ್ದಾರೆ. ಆದರೆ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ, ಕೊರೋನಾ ಅಪ್ಪಳಿಸಿದಾಗ ಬಂದು ವಿಚಾರಿಸದೆ ಈಗ ಚುನಾವಣಾ ಸಮಯದಲ್ಲಿ ಸೀರೆ ಹಂಚಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ರವಿಯವರು ಕಳಿಸಿದ ಸೀರೆಗಗಳಿಗೆ ಬೆಂಕಿಯಿಟ್ಟು ಸುಟ್ಟು ಹಾಕಿದರು. ಜನರ ಕೋಪ ಎದುರಿಸಲಾಗದೆ ಶಾಸಕರ ಬೆಂಬಲಿಗರು ಅಲ್ಲಿಂದ ಓಟಕಿತ್ತರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 08, 2023 10:22 AM
Latest Videos