ಅನಿಲ್ ಕಪೂರ್-ಶೋಭಿತಾ ನೋಡಿ ನೈಸ್ ಜೋಡಿ ಎಂದ ಫ್ಯಾನ್ಸ್; ನಟಿಯ ರಿಯಾಕ್ಷನ್ ಏನು?

Updated on: May 20, 2026 | 10:00 AM

ಅನಿಲ್ ಕಪೂರ್ ಹಾಗೂ ಶೋಭಿತಾ ಧುಲಿಪಾಲ್ ಅವರು ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶೋಭಿತಾ ಹಾಗೂ ಅನಿಲ್ ಅವರು ಆಪ್ತವಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಗಮನ ಸೆಳೆಯೋ ರೀತಿಯಲ್ಲಿ ಇದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಶೋಭಿತಾ ಹಾಗೂ ಅನಿಲ್ ಕಪೂರ್ ಅವರು ಈ ಮೊದಲು ‘ದಿ ನೈಟ್ ಮ್ಯಾನೇಜರ್’ ವೆಬ್ ಸರಣಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅನಿಲ್ ಕಪೂರ್ ಲವರ್ ಆಗಿ ಶೋಭಿತಾ ಮಿಂಚಿದ್ದರು. ಈ ಸರಣಿ ಸಮಯದಲ್ಲಿ ಇಬ್ಬರೂ ಒಟ್ಟಾಗಿ ಪೋಸ್​ ಕೊಟ್ಟ ವಿಡಿಯೋನ ಈಗ ವೈರಲ್ ಮಾಡಲಾಗುತ್ತಿದೆ. ‘ನಿಮ್ಮದು ಬೆಸ್ಟ್ ಜೋಡಿ’ ಎಂದು ಹೇಳಿದ್ದಕ್ಕೆ ಅನಿಲ್ ಹಾಗೂ ಶೋಭಿತಾ ನಕ್ಕಿದ್ದರು. ಈ ಸಮಯದಲ್ಲಿ ಶೋಭಿತಾ ಸೊಂಟವನ್ನು ಅನಿಲ್ ಕಪೂರ್ ಬಿಗಿದಪ್ಪಿ ಹಿಡಿದಿದ್ದರು. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಅನಿಲ್ ಅವರು ಶೋಭಿತಾನ ಆ ರೀತಿಯಲ್ಲಿ ಹಿಡಿದಿದ್ದು ಸರಿ ಅಲ್ಲ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More