ಧರ್ಮೇಂದ್ರ ನಿಧನ: ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಅನಿರುದ್ಧ್ ಜತ್ಕರ್
ಧರ್ಮೇಂದ್ರ ನಿಧನದ ಸುದ್ದಿ ತಿಳಿದು ಎಲ್ಲರೂ ಕಂಬನಿ ಮಿಡಿದರು. ಹಿಂದಿ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಬಂದು ಅಂತಿಮ ದರ್ಶನ ಪಡೆದರು. ಮುಂಬೈನಲ್ಲಿ ಧರ್ಮೇಂದ್ರ ಅವರ ಅಂತ್ಯಕ್ರಿಯೆ ಮಾಡಲಾಯಿತು. ಕನ್ನಡ ಚಿತ್ರರಂಗದ ನಟ ಅನಿರುದ್ಧ್ ಜತ್ಕರ್ ಅವರು ಹಾಡಿನ ಮೂಲಕ ಧರ್ಮೇಂದ್ರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಭಾರತೀಯ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ (Dharmendra) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನವೆಂಬರ್ 24ರಂದು ಕೊನೆಯುಸಿರು ಎಳೆದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಧರ್ಮೇಂದ್ರ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಧರ್ಮೇಂದ್ರ ನಿಧನದ ಸುದ್ದಿ ತಿಳಿದು ಎಲ್ಲರೂ ಕಂಬನಿ ಮಿಡಿದರು. ಹಿಂದಿ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಬಂದು ಅಂತಿಮ ದರ್ಶನ ಪಡೆದರು. ಮುಂಬೈನಲ್ಲಿ ಧರ್ಮೇಂದ್ರ ಅವರ ಅಂತ್ಯಕ್ರಿಯೆ ಮಾಡಲಾಯಿತು. ಕನ್ನಡ ಚಿತ್ರರಂಗದ ನಟ ಅನಿರುದ್ಧ್ ಜತ್ಕರ್ (Aniruddha Jatkar) ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಡಿನ ಮೂಲಕ ಧರ್ಮೇಂದ್ರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಧರ್ಮೇಂದ್ರ ನಟನೆಯ ‘ಬ್ಲಾಕ್ಮೇಲ್’ ಸಿನಿಮಾದ ‘ಪಲ್ ಪಲ್ ದಿಲ್ ಕೆ ಪಾಸ್..’ ಗೀತೆಯನ್ನು ಹಾಡಿ ಅನಿರುದ್ಧ್ ಅವರು ಗಾನ ನಮನ ಸಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.