ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..

Updated on: Mar 28, 2025 | 9:08 PM

‘ಇಂದು ನನ್ನ ದೊಡ್ಡ ಕನಸು ನನಸಾಗಿದೆ. ತುಂಬ ಪ್ರೀತಿಯಿಂದ ಸಿನಿಮಾ ಮಾಡಿದ್ದೇವೆ. ಯೋಗರಾಜ್ ಭಟ್ ಸರ್ ನಮ್ಮ ಮೇಲೆ ನಂಬಿಕೆ ಇಟ್ಟು ಈ ಅವಕಾಶ ಕೊಟ್ಟರು’ ಎಂದು ಅಂಜಲಿ ಅನೀಶ್ ಹೇಳಿದ್ದಾರೆ. ‘ನಾನು ಎಮೋಷನಲ್ ಆಗಿದ್ದೇನೆ. ಜನರು ಇಷ್ಟು ಇಷ್ಟಪಟ್ಟಿದ್ದಾರೆ. ಆಗ ಮುಂಗಾರುಮಳೆ, ಈಗ ಮನದ ಕಡಲು’ ಎಂದು ನಟಿ ರಾಶಿಕಾ ಶೆಟ್ಟಿ ಹೇಳಿದ್ದಾರೆ.

ಯೋಗರಾಜ್ ಭಟ್ (Yogaraj Bhat) ನಿರ್ದೇಶನ ಮಾಡಿದ ‘ಮನದ ಕಡಲು’ ಸಿನಿಮಾ ಇಂದು (ಮಾರ್ಚ್​ 28) ಬಿಡುಗಡೆ ಆಗಿದೆ. ಚಿತ್ರದ ನಾಯಕಿಯರಾದ ಅಂಜಲಿ ಅನೀಶ್ (Anjali Anish) ಮತ್ತು ರಾಶಿಕಾ ಶೆಟ್ಟಿ ಅವರು ಮೊದಲ ದಿನವೇ ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ನೋಡಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ತಮಗೆ ಖುಷಿ ಆಗಿದೆ ಎಂದು ಅವರು ಹೇಳಿದ್ದಾರೆ. ಈ ಸಿನಿಮಾದಲ್ಲಿ ಸುಮುಖ ಅವರು ಹೀರೋ ಆಗಿ ಅಭಿನಯಿಸಿದ್ದಾರೆ. ‘ಮುಂಗಾರುಮಳೆ’ ಚಿತ್ರದ ನಿರ್ಮಾಪಕ ಇ. ಕೃಷ್ಣಪ್ಪ ಅವರು ಈಗ ‘ಮನದ ಕಡಲು’ (Manada Kadalu) ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More