AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ; ವಿಡಿಯೋ

ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ; ವಿಡಿಯೋ

ಪೃಥ್ವಿಶಂಕರ
|

Updated on: Jan 30, 2026 | 4:45 PM

Share

Sanju Samson's Thiruvananthapuram T20 Homecoming: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ತಿರುವನಂತಪುರಂಗೆ ಆಗಮಿಸಿದೆ. ಸ್ಥಳೀಯ ಆಟಗಾರ ಸಂಜು ಸ್ಯಾಮ್ಸನ್ ತಮ್ಮ ತವರು ಮೈದಾನದಲ್ಲಿ ಮೊದಲ ಅಂತರಾಷ್ಟ್ರೀಯ ಪಂದ್ಯವಾಡುತ್ತಿದ್ದು, ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಪಡೆದಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್, ಸಂಜುಗೆ ಕಾಮಿಡಿ ಗಾರ್ಡ್ ಆಗಿ ಸ್ವಾಗತ ನೀಡಿರುವ ವಿಡಿಯೋ ವೈರಲ್ ಆಗಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಐದನೇ ಮತ್ತು ಅಂತಿಮ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಕೇರಳದ ತಿರುವನಂತಪುರಂಗೆ ಆಗಮಿಸಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿರುವ ಸಂಜು ಸ್ಯಾಮ್ಸನ್ ಕೇರಳದ ತಿರುವನಂತಪುರದವರಾಗಿದ್ದಾರೆ. ಅಲ್ಲದೆ ಸಂಜು ಸ್ಯಾಮ್ಸನ್ ಇದೇ ಮೊದಲ ಬಾರಿಗೆ ತನ್ನ ತವರಿನಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ ಸಂಜು ಆಟವನ್ನು ನೋಡಲು ಕಾಯುತ್ತಿದ್ದಾರೆ. ತವರಿನಲ್ಲಿ ಮೊದಲ ಪಂದ್ಯವನ್ನಾಡಲು ಬಂದ ಸಂಜುಗೆ ವಿಶೇಷ ಸ್ವಾಗತ ಸಿಕ್ಕಿದೆ. ಅಭಿಮಾನಿಗಳಿಂದ ಮಾತ್ರವಲ್ಲದೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಕೂಡ ಸಂಜುಗೆ ವಿಶೇಷ ರೀತಿಯ ಸ್ವಾಗತ ನೀಡಿದ್ದಾರೆ.

ಟೀಂ ಇಂಡಿಯಾ ಆಟಗಾರರು ಕೇರಳದ ತಿರುವನಂತಪುರಂಗೆ ಆಗಮಿಸುತ್ತಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ. ಅದರಲ್ಲಿ ಸೂರ್ಯ ಮತ್ತು ಸ್ಯಾಮ್ಸನ್ ನಡುವಿನ ತಮಾಷೆಯ ಕ್ಷಣಗಳು ಹೈಲೈಟ್ ಆಗಿವೆ. ತಿರುವನಂತಪುರಂ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದ ಸಂಜು ಸ್ಯಾಮ್ಸನ್ ಅವರನ್ನು ಸೂರ್ಯಕುಮಾರ್ ಯಾದವ್ ವಿಶೇಷವಾಗಿ ಸ್ವಾಗತಿಸಿದ್ದಾರೆ. ಸಂಜುಗೆ ಅಂಗರಕ್ಷಕನಂತೆ ನಟಿಸಿರುವ ಸೂರ್ಯ, ದಾರಿ ಬಿಡಿ ದಾರಿ ಬಿಡಿ, ಚೇಟ (ಸಂಜು) ಅವರಿಗೆ ತೊಂದರೆಕೊಡಬೇಡಿ, ಅವರ ಫೋಟೋ ತೆಗೆಯಬೇಡಿ ಎಂದಿದ್ದಾರೆ. ಸೂರ್ಯ, ಸಂಜು ಅವರ ಕಾಲೆಳೆಯಲು ಈ ರೀತಿಯಾಗಿ ನಟಿಸಿದ್ದು, ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.