Uttara Kannada News: ವಿಜೃಂಭಣೆಯಿಂದ ನಡೆದ ಅವರ್ಸಾ ಬಂಡಿ ಹಬ್ಬ; ವಿಡಿಯೋ ಇಲ್ಲಿದೆ

|

Updated on: May 24, 2023 | 9:19 AM

ಪ್ರತಿ ವರ್ಷ ನಡೆಯುವ ವಿಶೇಷ ಅವರ್ಸಾ ಬಂಡಿ ಹಬ್ಬ ಆಚರಣೆ, ಈ ಬಾರಿ ಕೂಡ ವಿಜೃಂಭಣೆಯಿಂದ ನಡೆದಿದ್ದು, ತಾಯಿ ಪಲಕ್ಕಿ ಮೂರ್ತಿ ಹೊತ್ತು ತಿರುಗುವ ದೈವ ಆರಾಧಕರು, ಮಳೆಗಾಲ ಸಂಧರ್ಭದಲ್ಲಿ ರೋಗರುಜಿನಗಳು ಬಾರದಿರಲಿ ಎಂದು ಈ ಹಬ್ಬವನ್ನ ಆಚರಿಸುವ ವಾಡಿಕೆ ಇಲ್ಲಿಯ ಜನರದ್ದು.

ಅಂಕೋಲಾ: ಪ್ರತಿ ವರ್ಷ ನಡೆಯುವ ವಿಶೇಷ ಅವರ್ಸಾ ಬಂಡಿ ಹಬ್ಬ ಆಚರಣೆ, ಈ ಬಾರಿ ಕೂಡ ವಿಜೃಂಭಣೆಯಿಂದ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ(Ankola) ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆಯುವ ವಿಶೇಷ ಬಂಡಿ ಹಬ್ಬದಲ್ಲಿ ಭೂದೇವಿಗೆ ವಿಶೇಷ ಪೂಜೆ ಮಾಡುವ ಮೂಲಕ ಇದನ್ನು ಆಚರಿಸಲಾಗುತ್ತದೆ. ತಾಯಿ ಪಲಕ್ಕಿ, ಮೂರ್ತಿ ಹೊತ್ತು ತಿರುಗುವ ದೈವ ಆರಾಧಕರು. ಮಳೆಗಾಲ ಸಂಧರ್ಭದಲ್ಲಿ ರೋಗರುಜಿನಗಳು ಬಾರದಿರಲಿ ಎಂದು ಈ ಹಬ್ಬವನ್ನ ಆಚರಿಸುವ ವಾಡಿಕೆ ಇಲ್ಲಿಯ ಜನರದ್ದು, ಇನ್ನು ನಿನ್ನೆ ಸಹಸ್ರಾರು ಸಂಖ್ಯೆಯ ಭಕ್ತರ ಮಧ್ಯ ವಿಶೇಷವಾಗಿ ಬಂಡಿಹಬ್ಬ ಜರುಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ