AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bullock Cart Race: ಎತ್ತಿನ ಬಂಡಿಗಳ ಮಿಂಚಿನ ಓಟ: ಥ್ರಿಲ್ ಆದ ಹಾವೇರಿ ಭಾಗದ ರೈತರು!

Haveri: ರೈತರ ಜಾನಪದ ಕ್ರೀಡೆಯಾಗಿರೋ ಖಾಲಿ ಬಂಡಿ ಓಡಿಸೋ ಸ್ಪರ್ಧೆ ನೆರೆದಿದ್ದ ನೂರಾರು ಜನರಿಗೆ ಭರ್ಜರಿ ಮನರಂಜನೆ ಒದಗಿಸಿತು. ರೈತರಿಗೆ ಕೃಷಿ ಕೆಲಸದ ಮಧ್ಯೆ ಬಿಡುವಿರುವ ಸಮಯದಲ್ಲಿ ರೈತರು ಎತ್ತಿನಬಂಡಿ ಓಡಿಸಿ ಭರ್ಜರಿ ಖುಷಿ ಅನುಭವಿಸಿದ್ರು.

Bullock Cart Race: ಎತ್ತಿನ ಬಂಡಿಗಳ ಮಿಂಚಿನ ಓಟ: ಥ್ರಿಲ್ ಆದ ಹಾವೇರಿ ಭಾಗದ ರೈತರು!
ಎತ್ತಿನ ಬಂಡಿಗಳ ಮಿಂಚಿನ ಓಟ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 22, 2022 | 5:22 PM

ಅಲ್ಲಿ ಜನರ ಕೇಕೆ, ಸಿಳ್ಳೆ, ಚಪ್ಪಾಳೆಗಳ ಸದ್ದು ಮುಗಿಲು ಮುಟ್ಟಿತ್ತು. ಗೆಲುವು ನನ್ನದೇ, ಅಖಾಡದಲ್ಲಿ ನಂದೇ ಹವಾ ಅಂತಾ ಧೂಳೆಬ್ಬಿಸಿಕೊಂಡು ಓಡ್ತಿದ್ದ ಅವರ ಓಟ ನೋಡಿ ಕೆಲವರು ಅವರ ಜೊತೆಗೆ ಓಡುತ್ತಾ ಹೆಜ್ಜೆ ಹಾಕಿ ಮತ್ತಷ್ಟು ಹುಮ್ಮಸ್ಸು ನೀಡ್ತಿದ್ರು. ಕಟ್ ಮಸ್ತಾಗಿದ್ದ ಅವರ ಶರವೇಗದ ಓಟ ಎಂಥವರೂ ವ್ಹಾ… ವ್ಹಾ ಅನ್ನುವಂತಿತ್ತು. ಎತ್ತುಗಳ ಆ ಬಂಡಿ ಓಟ (Bullock Cart Race) ಭರ್ಜರಿಯಾಗಿತ್ತು. ಅಖಾಡಕ್ಕೆ ಬರ್ತಿರೋ ಕಟ್ ಮಸ್ತಾದ ಎತ್ತುಗಳು. ಮಿಂಚಿನ ಓಟ ಓಡ್ತಿರೋ ಎತ್ತುಗಳು. ಅಖಾಡದಲ್ಲಿ ನೆರೆದಿದ್ದ ರೈತಾಪಿ ಜನರಿಂದ (Farmers) ಕೇಕೆ, ಸಿಳ್ಳೆ. ಹೌದು ಈ ದೃಶ್ಯಗಳು ಕಂಡುಬಂದಿದ್ದು ಹಾವೇರಿ (Haveri) ತಾಲ್ಲೂಕಿನ ದೇವಗಿರಿಯಲ್ಲಾಪುರ ಗ್ರಾಮದಲ್ಲಿ. ದೇವಗಿರಿಯಲ್ಲಾಪುರ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಬಂಡಿ ಓಡಿಸುವ ಸ್ಪರ್ಧೆಯನ್ನ ಕಲ್ಲೇಶ್ವರ ಹೋರಿ ಸವಿನೆನಪಿಗಾಗಿ ಆಯೋಜನೆ ಮಾಡಲಾಗಿದೆ.

45 ಸಾವಿರ ರುಪಾಯಿ ಪ್ರಥಮ, 35 ಸಾವಿರ ರುಪಾಯಿ ದ್ವಿತೀಯ, 25 ಸಾವಿರ ರುಪಾಯಿ ತೃತೀಯ ಸೇರಿದಂತೆ ಒಟ್ಟು ಹಲವು ನಗದು ಬಹುಮಾನಗಳನ್ನು ಇಡಲಾಗಿತ್ತು. ಕಲ್ಲೇಶ್ವರ ಹೋರಿಯ ಸವಿನೆನಪಿಗಾಗಿ ಇದೇ ಪ್ರಥಮ ಭಾರಿಗೆ ರಾಜ್ಯಮಟ್ಟದ ಖಾಲಿ ಬಂಡಿ ಓಡಿಸೋ ಸ್ಪರ್ಧೆ ನಡೆಸಿಕೊಂಡು ಬರಲಾಗ್ತಿದೆ. ರೈತರ ಹಬ್ಬ ಅನ್ನುವಂತೆ ಗ್ರಾಮದ ರೈತರೆಲ್ಲ ಸೇರಿಕೊಂಡು ಸಂಭ್ರಮದಿಂದ ಖಾಲಿ ಗಾಡಿ ಓಡಿಸೋ ಸ್ಪರ್ಧೆ ನಡೆಸ್ತಾರೆ ಎಂದು ಮಾಹಿತಿ ನೀಡಿದವರು ಸಂಘಟಕ ಆಶೋಕ.

ಧಾರವಾಡ, ಬೆಳಗಾವಿ, ಗದಗ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 80ಕ್ಕೂ ಅಧಿಕ ಜೋಡಿ ಎತ್ತುಗಳು ಭರ್ಜರಿಯಾಗಿ ಮಿಂಚಿನ ಓಟ ಓಡಿದವು‌. ಒಂದೊಂದು ಜೋಡಿ ಎತ್ತುಗಳಿಗೂ ಒಂದೊಂದು ನಿಮಿಷ ಸಮಯ ನಿಗದಿ ಮಾಡಲಾಗಿತ್ತು. ಒಂದು ನಿಮಿಷದಲ್ಲಿ ಕೆಲವೊಂದು ಜೋಡಿಗಳು ಹದಿನೈದು, ಹದಿನಾರು, ಹದಿನೇಳು, ಎರಡು ಸಾವಿರ ಫೂಟ್ ವರೆಗೂ ಓಡಿದವು.

ಹೆಚ್ಚು ದೂರ ಓಡಿದ ಎತ್ತುಗಳ ಮಾಲೀಕರು ಮತ್ತು ಅಭಿಮಾನಿಗಳು ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಭರ್ಜರಿ ಖುಷಿಯಲ್ಲಿ ತೇಲಿದ್ರು. ಕಡಿಮೆ ದೂರ ಓಡಿದ ಎತ್ತುಗಳ ಮಾಲೀಕರು ಹಾಗೂ ಅಭಿಮಾನಿಗಳು ಸಪ್ಪೆ ಮೋರೆ ಹಾಕ್ಕೊಂಡು ಊರಿನತ್ತ ಹೆಜ್ಜೆ ಹಾಕಿದ್ರು. ಎತ್ತಿನ ಬಂಡಿ ಓಟಕ್ಕೆ ಅಂತಲೆ ರೈತರು ವಿಶೇಷವಾಗಿ ಎತ್ತುಗಳನ್ನ ತಯಾರು ಮಾಡಿರ್ತಾರೆ.

ಶೇಂಗಾ ಹೊಟ್ಟು, ಮೊಟ್ಟೆ, ಹಿಂಡಿ, ನುಚ್ಚು ಸೇರಿದಂತೆ ವಿವಿಧ ರೀತಿಯ ಪೌಷ್ಟಿಕಾಂಶ ಭರಿತ ಪದಾರ್ಥಗಳನ್ನು ತಿನ್ನಿಸಿ ಭರ್ಜರಿಯಾಗಿ ತಯಾರು ಮಾಡಿದ್ರು. ಕಟ್ ಮಸ್ತಾಗಿ ತಯಾರಾಗಿದ್ದು ಎತ್ತುಗಳು ಮಿಂಚಿನ ಓಟ ನೋಡಿ ನೆರೆದಿದ್ದ ಸಾವಿರಾರು ಜನರಿಗೆ ಖುಷಿ ನೀಡಿತು. ಕಟ್ ಮಸ್ತಾಗಿ ತಯಾರಾಗಿದ್ದ ಎತ್ತುಗಳು ಅಖಾಡದಲ್ಲಿ ಧೂಳೆಬ್ಬಿಸಿಕೊಂಡು ಗೆಲುವು ನನ್ನದೆ ಅಂತಾ ಶರವೇಗದ ಓಟ ಓಡಿ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದವು‌.

ರೈತರ ಜಾನಪದ ಕ್ರೀಡೆಯಾಗಿರೋ ಖಾಲಿ ಬಂಡಿ ಓಡಿಸೋ ಸ್ಪರ್ಧೆ ನೆರೆದಿದ್ದ ನೂರಾರು ಜನರಿಗೆ ಭರ್ಜರಿ ಮನರಂಜನೆ ಒದಗಿಸಿತು. ರೈತರಿಗೆ ಕೃಷಿ ಕೆಲಸದ ಮಧ್ಯೆ ಬಿಡುವಿರುವ ಸಮಯದಲ್ಲಿ ರೈತರು ಎತ್ತಿನಬಂಡಿ ಓಡಿಸಿ ಭರ್ಜರಿ ಖುಷಿ ಅನುಭವಿಸಿದ್ರು. ಒಟ್ನಲ್ಲಿ ರಾಜ್ಯಮಟ್ಟದ ಬಂಡಿ ಓಡಿಸೋ ಸ್ಪರ್ಧೆ ಅಖಾಡದ ತುಂಬ ನೆರೆದಿದ್ದ ಜನರಿಗೆ ಸಖತ್ ಖುಷಿ ನೀಡಿತು.

ವರದಿ: ರವಿ ಹೂಗಾರ, ಟಿವಿ 9, ಹಾವೇರಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:21 pm, Thu, 22 December 22