ದಾವಣಗೆರೆ: ಕೃತಕ ಆನೆಯ ಮೇಲೆ ದುರ್ಗೆಯ ಮೆರವಣಿಗೆ; ಮಾಯಕೊಂಡದಲ್ಲಿ ವಿಶೇಷ ಹಬ್ಬ ಆಚರಣೆ

ದಾವಣಗೆರೆ ಮಾಯಕೊಂಡ ಹಾಗೂ ಹರಿಹರ ತಾಲೂಕಿನ ಹಿಂಡ್ಲಘಟ್ಟದಲ್ಲಿ ವಿಶೇಷ ರೀತಿಯಲ್ಲಿ ಹಬ್ಬಗಳನ್ನು ಆಚರಿಸಲಾಗಿದೆ. ಈ ಕುರಿತ ವರದಿ ಇಲ್ಲಿದೆ.

ದಾವಣಗೆರೆ: ಕೃತಕ ಆನೆಯ ಮೇಲೆ ದುರ್ಗೆಯ ಮೆರವಣಿಗೆ; ಮಾಯಕೊಂಡದಲ್ಲಿ ವಿಶೇಷ ಹಬ್ಬ ಆಚರಣೆ
ಮಾಯಕೊಂಡದಲ್ಲಿ ಕೃತಕ ಆನೆಯ ಮೆರವಣಿಗೆ


ಮಾಯಕೊಂಡ: ಮಾಯಕೊಂಡದ ಮೂರು ಗರಡಿ ಮನೆಯ ಪೈಲ್ವಾನರು ಸೇರಿ ದುರ್ಗೆಯ ವಿಶೇಷ ಹಬ್ಬವನ್ನು ಆಚರಿಸಿದ್ದಾರೆ. ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ವಿಶೇಷ ಸಂಪ್ರದಾಯ ಇದಾಗಿದೆ. ಪೇಟೆ ಗರಡಿ, ಕೋಟೆ ಗರಡಿ ಮನೆಯ ಪೈಲ್ವಾನರಿಂದ ಕೃತಕ ಆನೆ ನಿರ್ಮಾಣ ಮಾಡಿ, ಅದಕ್ಕೆ ಎತ್ತಿನ ಬಂಡಿ ಹೂಡಿ ಕೃತಕ ಆನೆಯ ಮೇಲೆ ದುರ್ಗೆಯನ್ನಿಟ್ಟು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಶತಮಾನಗಳಿಂದ ನಡೆದುಕೊಂಡು ಬಂದ ಕೃತಕ ಆನೆ ಸಂಪ್ರದಾಯದ ವಿಶೇಷ ಹಬ್ಬ ಇದಾಗಿದೆ.

ಈ ಕುರಿತ ವಿಡಿಯೋ ವರದಿ ಇಲ್ಲಿದೆ:

ಹರಿಹರ: ಹಿಂಡಸಘಟ್ಟ ಗ್ರಾಮದಲ್ಲಿ ವಿಶೇಷ ರೀತಿಯಲ್ಲಿ ಬನ್ನಿ ಹಬ್ಬ ಆಚರಣೆ
ಹರಿಹರ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಿಂಡಸಘಟ್ಟ ಗ್ರಾಮದಲ್ಲಿ ಕೈಯಲ್ಲಿ ಕಬ್ಬು ಹಿಡಿದುಕೊಂಡು ರಥದೊಂದಿಗೆ ತೆರಳಿ ವಿಶೇಷ ಬನ್ನಿ ಹಬ್ಬ ಆಚರಣೆ ನಡೆಸಲಾಗಿದೆ. ದಸರಾ ಹಬ್ಬ ಮುಗಿದ ಬಳಿಕ ಪಕ್ಕದೂರಿನ ಕೊಡಗನೂ ಆಂಜನೇಯ ಸ್ವಾಮಿ ತಂದು ವಿಶೇಷ ಬನ್ನಿ ಹಬ್ಬ ಆಚರಿಸಲಾಗಿದೆ. ಬೆಳಗ್ಗೆ ಆರು ಗಂಟೆಗೆ ಗ್ರಾಮದ ಆಂಜನೇಯ ಸ್ವಾಮಿ ಹಾಗೂ ಸಿದ್ದೇಶ್ವರ ಸ್ವಾಮಿ ದೇವರುಗಳ ಜೊತೆ ಗ್ರಾಮ ಬಿಟ್ಟು ಹೊರವಲಯದಲ್ಲಿ ಗ್ರಾಮಸ್ಥರು ಬನ್ನಿ ಹಬ್ಬ ಆಚರಿಸಿದ್ದಾರೆ. ರಥದೊಂದಿಗೆ ಗ್ರಾಮದ ಹೊರವಲಯದ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಬನ್ನಿ ಹಬ್ಬವನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದ್ದಾರೆ.

ದಾವಣಗೆರೆ: ಇಂದು ಕೊರೊನಾ ವಾರಿಯರ್ಸ್​ಗೆ ಅಭಿನಂದನಾ ಸಮಾರಂಭ:
ದಾವಣಗೆರೆ: ಜಿಲ್ಲೆಯ ನ್ಯಾಮತಿ ಪಟ್ಟಣದ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಇಂದು ಕೊರೊನಾ ವಾರಿಯರ್ಸ್​​ಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಮಾಜಿ ಸಿಎಂ ಬಿಎಸ್​​ವೈ ಬೆಸ್ಟ್ ಕೊರೊನಾ ವಾರಿಯರ್ಸ್‌ ಪ್ರಶಸ್ತಿಯನ್ನು ಈ ವೇಳೆ ನೀಡಲಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನ 4 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಗಳಿಗೆ ಈ ವೇಳೆ ಅಭಿನಂದನೆ ಸಲ್ಲಿಸಲಾಗುತ್ತದೆ. ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ‌ ಬೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:

ಎಎಸ್ಐ ಮತ್ತು ಪುತ್ರನಿಂದ ಹಲ್ಲೆ ಆರೋಪ; ಮಗಳನ್ನು ಕಿಡ್ನಾಪ್ ಮಾಡಲು ಬಂದಿದ್ದಾರೆಂದು ಹಿಗ್ಗಾಮುಗ್ಗಾ ಥಳಿತ

Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್​ ಖಾನ್​; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್​ ಮಗನ ವರ್ತನೆ

Click on your DTH Provider to Add TV9 Kannada