ನಾಯಿ ಕೊಂದವಳಿಗೆ ಶಾಕ್ ಮೇಲೆ ಶಾಕ್: ಆರೋಪಿ ಪುಷ್ಪಲತಾ ಮೇಲೆ ಮತ್ತೊಂದು ಕೇಸ್
ಲಿಫ್ಟ್ನಲ್ಲಿ ನಾಯಿಯನ್ನು ಬಡಿದು ಕೊಂದಿದ್ದ ಆರೋಪಿ ಪುಷ್ಪಲತಾಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಪ್ರಕರಣ ಸಂಬಂಧ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆಕೆಯ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಮನೆಯಲ್ಲಿದ್ದ ಚಿನ್ನದ ಆಭರಣ ಕಳುವಾಗಿರುವ ಬಗ್ಗೆ ಮಾಲಕಿ ರಾಶಿಕಾ ದೂರಿನಂತೆ ಬಾಗಲೂರು ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಬೆಂಗಳೂರು, ನವೆಂಬರ್ 05: ಲಿಫ್ಟ್ನಲ್ಲಿ ನಾಯಿ ಮೇಲೆ ಹಲ್ಲೆ ಮಾಡಿ ಕೊಂದಿರುವ ಪ್ರಕರಣದ ಆರೋಪಿ ಪುಷ್ಪಲತಾ ವಿರುದ್ಧ ಚಿನ್ನಾಭರಣ ಕಳ್ಳತನ ಆರೋಪ ಹಿನ್ನೆಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ನಾಯಿಮರಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಪುಷ್ಪಲತಾಳನ್ನ ಈಗಾಗಲೇ ಬಂಧಿಸಲಾಗಿದ್ದು, ಆಕೆ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಈ ನಡುವೆ ಮನೆಯ ಮಾಲಕಿ ರಾಶಿಕಾ ನೀಡಿದ ದೂರಿನ ಅನ್ವಯ ಇದೀಗ ಬಾಗಲೂರು ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ನ.2ರಂದು ಮನೆಯಯಲ್ಲಿ ಇಟ್ಟಿದ್ದ ಸುಮಾರು 50 ಗ್ರಾಂ ಮೌಲ್ಯದ ಚಿನ್ನದ ಸರ, ಒಂದು ಉಂಗುರ, ಒಂದು ವಜ್ರದ ಉಂಗುರ ಕಾಣೆಯಾಗಿದೆ ಎಂದು ದೂರಲ್ಲಿ ತಿಳಿಸಲಾಗಿದ್ದು, ಮನೆಕೆಲಸದಾಕೆ ಪುಷ್ಪಲತಾ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ವಿಚಾರಣೆ ವೇಳೆ ಪುಷ್ಪಲತಾ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದರ ಬಗ್ಗೆ ಮಾಹಿತಿ ಇರುವ ಕಾರಣ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕದ್ದ ಚಿನ್ನವನ್ನು ಅದೇ ಮನೆಯಲ್ಲಿಮನೆಕೆಲಸದಾಕೆ ಪುಷ್ಪಲತಾ ಬಚ್ಚಿಟ್ಟಿದ್ದಳು ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
