ತಂದೆ-ತಾಯಿ ಸಮಾಧಿ ಪಕ್ಕವೇ ಶಾಸಕ ಹೆಚ್.ವೈ. ಮೇಟಿ ಅಂತ್ಯಕ್ರಿಯೆ
ಶಾಸಕ ಹೆಚ್.ವೈ.ಮೇಟಿ (79) ಅವರ ಅಂತ್ಯಕ್ರಿಯೆ ಹುಟ್ಟೂರಾದ ತಿಮ್ಮಾಪುರ ಗ್ರಾಮದ ಜಮೀನಿನಲ್ಲಿ ನಡೆಯಿತು. ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಹೆಚ್.ವೈ.ಮೇಟಿ ಅವರನ್ನ ಕುರುಬ ಸಮುದಾಯದ ಸಂಪ್ರದಾಯದಂತೆ ಮಣ್ಣು ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಸೇರಿ ರಾಜ್ಯ ಸರ್ಕಾರದ ಹಲವು ಸಚಿವರು ಈ ವೇಳೆ ಉಪಸ್ಥಿತರಿದ್ದರು. ಶಾಸಕರ ಅಂತ್ಯಕ್ರಿಯೆಗೆ ಜನ ಸಾಗರವೇ ಹರಿದುಬಂದಿತ್ತು.
ಬಾಗಲಕೋಟೆ, ನವೆಂಬರ್ 05: ಅನಾರೋಗ್ಯದ ಹಿನ್ನಲೆ ಮರತಪಟ್ಟ ಶಾಸಕ ಹೆಚ್.ವೈ.ಮೇಟಿ (79) ಅವರ ಅಂತ್ಯಕ್ರಿಯೆ ಹುಟ್ಟೂರಾದ ತಿಮ್ಮಾಪುರ ಗ್ರಾಮದ ಜಮೀನಿನಲ್ಲಿ ನಡೆಯಿತು. ಕುರುಬ ಸಮುದಾಯದ ಸಂಪ್ರದಾಯದಂತೆ ನಡೆದ ಅಂತ್ಯಸಂಸ್ಕಾರ ನಡೆದಿದ್ದು, ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಹೆಚ್.ವೈ.ಮೇಟಿ ಅವರನ್ನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದ್ದು, ಹೆಚ್.ವೈ.ಮೇಟಿ ಪುತ್ರರಿಗೆ ರಾಷ್ಟ್ರಧ್ವಜವನ್ನ ಸಿಎಂ ಸಿದ್ದರಾಮಯ್ಯ ಹಸ್ತಾಂತರಿಸಿದರು.ಹೆಚ್.ವೈ.ಮೇಟಿ ಅಂತ್ಯಕ್ರಿಯೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಭೈರತಿ ಸುರೇಶ್, ಹೆಚ್.ಸಿ.ಮಹದೇವಪ್ಪ, ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿದ್ದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 05, 2025 05:09 PM

