AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HY Meti Death: ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​. ವೈ. ಮೇಟಿ ಇನ್ನಿಲ್ಲ

ಮಾಜಿ ಮಂತ್ರಿ ಹೆಚ್​ ವೈ ಮೇಟಿ ನಿಧನ: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಾಂಗ್ರೆಸ್​ ಹಿರಿಯ ಶಾಸಕ ಹೆಚ್​. ವೈ. ಮೇಟಿ(79) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದ ಹಿನ್ನಲೆ ಅವರು ಮೃತಪಟ್ಟಿದ್ದಾರೆ. ಶಾಸಕರ ನಿಧನಕ್ಕೆ ಕಾಂಗ್ರೆಸ್​ ನಾಯಕರು ಕಂಬನಿ ಮಿಡಿದಿದ್ದಾರೆ.

HY Meti Death: ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​. ವೈ. ಮೇಟಿ ಇನ್ನಿಲ್ಲ
ಹೆಚ್​. ವೈ. ಮೇಟಿ(79) ವಿಧಿವಶ
ಪ್ರಸನ್ನ ಹೆಗಡೆ
|

Updated on:Nov 04, 2025 | 1:04 PM

Share

ಬೆಂಗಳೂರು, ನವೆಂಬರ್​ 04: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ.ಮೇಟಿ (79) ವಿಧಿವಶರಾಗಿದ್ದಾರೆ. ಬಾಗಲಕೋಟೆ ಕಾಂಗ್ರೆಸ್​ ಶಾಸಕರಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಹೆಚ್​.ವೈ. ಮೇಟಿ ಅವರನ್ನ ಖಾಸಗಿ ಆಸ್ಪತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ H​.Y. ಮೇಟಿ, ಜಿಲ್ಲೆಯ ತಿಮ್ಮಾಪುರದಲ್ಲಿ 1946 ಅಕ್ಟೋಬರ್ 9ರಂದು ಜನಿಸಿದ್ದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿದ್ದ H​.Y.ಮೇಟಿ, 1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಗುಳೇದಗುಡ್ಡದಲ್ಲಿ ಜೆಡಿಎಸ್​ನಿಂದ 2ನೇ ಬಾರಿ ಗೆಲುವು ಸಾಧಿಸಿ ದೇವೇಗೌಡರ ಸಂಪುಟದಲ್ಲಿ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ 1996ರಲ್ಲಿ ಬಾಗಲಕೋಟೆ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದು, 2004ರಲ್ಲಿ ಮತ್ತೆ ಗುಳೇದಗುಡ್ಡ ಕ್ಷೇತ್ರದಿಂದ  ಗೆದ್ದಿದ್ದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ 38 ಹಳ್ಳಿಗಳಿಗಿಲ್ಲ ಬಸ್: ಖರ್ಗೆ ವಿರುದ್ಧ ಅಶೋಕ್ ಆಕ್ರೋಶ

2008ರಲ್ಲಿ ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಿದ್ದ ಇವರು 2008ರಲ್ಲಿ ಬಾಗಲಕೋಟೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಮೇಟಿ, ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಹೆಚ್​.ವೈ.ಮೇಟಿ, 2023ರಲ್ಲಿ ಬಾಗಲಕೋಟೆಯಲ್ಲಿ ಕಾಂಗ್ರೆಸ್​ನಿಂದ ಸ್ಫರ್ಧಿಸಿ ಗೆಲುವಿನ ನಗೆ ಬೀರಿದ್ದರು.

ನಾಳೆ ಹುಟ್ಟೂರಲ್ಲಿ ಅಂತ್ಯಕ್ರಿಯೆ

ಹೆಚ್​.ವೈ. ಮೇಟಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ ನಾಳೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ ಪಕ್ಷದ ಪ್ರಮುಖರು ಈ ವೇಳೆ ಭಾಗಿಯಾಗಲಿದ್ದಾರೆ.

ಉಮಾಶ್ರೀ ಸಂತಾಪ

ಹೆಚ್​.ವೈ.ಮೇಟಿ ಅವರ ನಿಧನಕ್ಕೆ ವಿಧಾನಪರಿಷತ್​ ಸದಸ್ಯೆ ಉಮಾಶ್ರೀ ಸಂತಾಪ ವ್ಯಕ್ತಪಡಿಸಿದ್ದಾರೆ. ಟಿವಿ9 ಜೊತೆಗೆ ಮಾತನಾಡಿದ ಅವರು, ಮೇಟಿ ಅವರ ಸಾವಿನ ಸುದ್ದಿ ಕೇಳಿ ನನಗೆ ಆಘಾತ ಆಗಿದೆ. ಎಲ್ಲ ಸಮುದಾಯಗಳನ್ನ ಸಮನಾಗಿ ಕಾಣುತ್ತಿದ್ದ ನಾಯಕರಾಗಿದ್ದ ಅವರು, ಅನೇಕ ಸಮುದಾಯಗಳಿಗೆ ಶಕ್ತಿ ತುಂಬಿದವರಾಗಿದ್ದರು ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:42 pm, Tue, 4 November 25

ಸೋಷಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್
ಸೋಷಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್
ಕ್ರಾಂತಿ ಕಿಚ್ಚಿನ ಮಧ್ಯೆ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಕೆ
ಕ್ರಾಂತಿ ಕಿಚ್ಚಿನ ಮಧ್ಯೆ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಕೆ
ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ
ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ
IND vs PAK: ಪಾಕಿಸ್ತಾನ್ ವಿರುದ್ಧ ಹೀನಾಯವಾಗಿ ಸೋತ ಭಾರತ
IND vs PAK: ಪಾಕಿಸ್ತಾನ್ ವಿರುದ್ಧ ಹೀನಾಯವಾಗಿ ಸೋತ ಭಾರತ
ಒಬ್ಬನನ್ನೇ ವರಿಸಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಪತ್ನಿ
ಒಬ್ಬನನ್ನೇ ವರಿಸಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಪತ್ನಿ
ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಮೆದುಳು ತಿನ್ನುವ ಅಮೀಬಾ ಭೀತಿ
ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಮೆದುಳು ತಿನ್ನುವ ಅಮೀಬಾ ಭೀತಿ
ಅಶ್ವಿನಿ ಗೌಡಗೆ ಶಿಕ್ಷೆ ಕೊಡಿಸಿದ ಗಿಲ್ಲಿ; ಉರಿಯೋ ಬೆಂಕಿಗೆ ತುಪ್ಪ
ಅಶ್ವಿನಿ ಗೌಡಗೆ ಶಿಕ್ಷೆ ಕೊಡಿಸಿದ ಗಿಲ್ಲಿ; ಉರಿಯೋ ಬೆಂಕಿಗೆ ತುಪ್ಪ
ಬಲೂಚಿಸ್ತಾನಲ್ಲಿ ಮತ್ತೆ ಜಾಫರ್ ಎಕ್ಸ್​ಪ್ರೆಸ್ ರೈಲಿನ ಮೇಲೆ ದಾಳಿ
ಬಲೂಚಿಸ್ತಾನಲ್ಲಿ ಮತ್ತೆ ಜಾಫರ್ ಎಕ್ಸ್​ಪ್ರೆಸ್ ರೈಲಿನ ಮೇಲೆ ದಾಳಿ
Daily Devotional:ಕಾರ್ತೀಕ ಮಾಸದ ಕೊನೆ ಸೋಮವಾರ ವಿಧಿ ವಿಧಾನ
Daily Devotional:ಕಾರ್ತೀಕ ಮಾಸದ ಕೊನೆ ಸೋಮವಾರ ವಿಧಿ ವಿಧಾನ
ಇಂದು ಈ ರಾಶಿಯವರು ಅನ್ಯ ಮನಸ್ಸಿನಿಂದ ವ್ಯಾಪಾರ ಹಾಳುಮಾಡಿಕೊಳ್ಳಬಹುದು
ಇಂದು ಈ ರಾಶಿಯವರು ಅನ್ಯ ಮನಸ್ಸಿನಿಂದ ವ್ಯಾಪಾರ ಹಾಳುಮಾಡಿಕೊಳ್ಳಬಹುದು