ಮುಂದುವರಿದ ಒತ್ತುವರಿ ತೆರವು ಕಾರ್ಯಾಚರಣೆ, ವ್ಹೈಟ್ ಫೀಲ್ಡ್ ನಲ್ಲಿ ವೃದ್ಧೆಯೊಬ್ಬರ ಗೋಳಾಟ, ಸಂಕಟ, ಕಣ್ಣೀರು!
ಅವರ ನೋವು ಅರ್ಥವಾಗುವಂಥದ್ದೇ ಆದರೆ, ಸರ್ಕಾರಿ ಜಮೀನಿನ ಮೇಲೆ ಮನೆ ಕಟ್ಟಿರುವುದರಿಂದ ಅದನ್ನು ನೆಲಸಮಗೊಳ್ಳದಂತೆ ತಡೆಯಲಾಗದು.
ಬೆಂಗಳೂರು: ದಸರಾ ರಜೆಯ ಬಳಿಕ ಒತ್ತುವರಿ ತೆರವು ಕಾರ್ಯಾಚರಣೆ (Anti-Encroachment Drive) ಮುಂದುವರಿದಿದೆ. ವ್ಹೈಟ್ ಫೀಲ್ಡ್ ನಲ್ಲಿರುವ ಈ ವೃದ್ಧೆಯ (elderly woman) ಮನೆ ರಾಜಕಾಲುವೆಗೆ ಮೀಸಲಾಗಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಿರುವುದರಿಂದ ನೆಲಸಮಗೊಳಿಸಲಾಗುತ್ತಿದೆ. ಆಘಾತಕ್ಕೊಳಗಾಗಿರುವ ಅಜ್ಜಿ ಪೊಲೀಸರು ಮತ್ತು ಬಿ ಬಿ ಎಮ್ ಪಿ (BBMP) ಸಿಬ್ಬಂದಿಯೊಂದಿಗೆ ತಕರಾರು ಆರಂಭಿಸಿದ್ದಾರೆ. ಜಾಗವನ್ನು ತನಗೆ ಮಾರಿದ ವ್ಯಕ್ತಿಯನ್ನು ಇಲ್ಲಿಗೆ ಕರೆತನ್ನಿ ಅಂತ ಹಟ ಮಾಡುತ್ತಾ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದ್ದಾರೆ. ಅವರ ನೋವು ಅರ್ಥವಾಗುವಂಥದ್ದೇ ಆದರೆ, ಸರ್ಕಾರಿ ಜಮೀನಿನ ಮೇಲೆ ಮನೆ ಕಟ್ಟಿರುವುದರಿಂದ ಅದನ್ನು ನೆಲಸಮಗೊಳ್ಳದಂತೆ ತಡೆಯಲಾಗದು.