ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 

Updated on: Apr 27, 2026 | 12:33 PM

Sa Re Ga Ma Pa: ಸರೆಗಮಪ ಆಡಿಷನ್​​ನ ಮೊದಲ ಹಂತ ಈಗಾಗೇ ಪೂರ್ಣಗೊಂಡಿದ್ದು, ಎರಡನೇ ಹಂತ ಕೂಡ ನಡೆಯುತ್ತದೆ. ಹೀಗಿರುವಾಗಲೇ ಸ್ಪರ್ಧಿಗಳಿಗೆ ವಿಶೇಷ ಆಡಿಷನ್ ಮಾಡಲಾಗಿದೆ. ಈ ಆಡಿಷನ್ ಅಲ್ಲಿ ಅನುಷ್ಕಾ ಎಂಬುವವರು ಜರ್ಮನ್ ಒಪೆರಾ ಹಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. 

‘ಸರೆಗಮಪ’ ಶೋ ಆರಂಭ ಆಗಿದೆ. ಇದಕ್ಕೆ ಆಡಿಷನ್ ನಡೆಯುತ್ತಿದೆ. ವಿವಿಧ ರೀತಿಯ ಸ್ಪರ್ಧಿಗಳು ಇದಕ್ಕೆ ಆಗಮಿಸಿದ್ದಾರೆ. ಅನುಷ್ಕಾ ಎಂಬ ಸ್ಪರ್ಧಿ ಜರ್ಮನ್ ಒಪೆರಾ ಹಾಡಿದ್ದಾರೆ. ಇದನ್ನು ಕೇಳಿ ಜಡ್ಜ್​​ಗಳು ಕೂಡ ಒಮ್ಮೆ ಶಾಕ್ ಆದರು. ಅರ್ಜುನ್ ಜನ್ಯ ಅವರು ತಲೆಬಾಗಿದರು. ಈ ವಿಡಿಯೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಆ ಸಂದರ್ಭದ ವಿಡಿಯೋ ಮೇಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Apr 27, 2026 12:32 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More