‘ಪದೇ ಪದೇ ಕೇಳಿ ಮುಜುಗರ ಮಾಡ್ತೀರಾ’; ‘ಮಾರ್ಟಿನ್’ ಬಗ್ಗೆ ಕೇಳಿದ್ದಕ್ಕೆ ನಿರ್ದೇಶಕನ ಅಸಮಾಧಾನ
‘ಮಾರ್ಟಿನ್’ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ಎಪಿ ಅರ್ಜುನ್ ಆಗಮಿಸಿದ್ದರು. ಈ ವೇಳೆ ಅವರಿಗೆ ‘ಮಾರ್ಟಿನ್’ ಸಿನಿಮಾ ಬಗ್ಗೆ ಪ್ರಶ್ನೆ ಎದುರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲವು ವದಂತಿಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ.
ಕಸ್ಟ್ಯೂಮ್ ಡಿಸೈನರ್ ಚೇತನ್ ಅವರು ಹೊಸ ಅಂಗಡಿ ಓಪನ್ ಮಾಡಿದ್ದಾರೆ. ಇದಕ್ಕೆ ‘ಮಾರ್ಟಿನ್’ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ಎಪಿ ಅರ್ಜುನ್ (AP Arjun) ಆಗಮಿಸಿದ್ದರು. ಈ ವೇಳೆ ಅವರಿಗೆ ‘ಮಾರ್ಟಿನ್’ ಸಿನಿಮಾ ಬಗ್ಗೆ ಪ್ರಶ್ನೆ ಎದುರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲವು ವದಂತಿಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸೋಕೆ ಧ್ರುವ ಸರ್ಜಾ ನಿರಾಕರಿಸಿದ್ದಾರೆ. ಎಪಿ ಅರ್ಜುನ್ ಅವರಿಗೆ ಈ ಪ್ರಶ್ನೆಯಿಂದ ಅಸಮಾಧಾನ ಆಗಿದೆ. ‘ಪದೇ ಪದೇ ಪ್ರಶ್ನೆ ಕೇಳಿ ಏಕೆ ಮುಜುಗರ ಮಾಡ್ತೀರಾ. ‘ಶೂಟಿಂಗ್ ಮುಗಿಸಿದ್ದೇವೆ. ಸಿಜಿ ಕೆಲಸ ಬಾಕಿ ಇದೆ. ಅದನ್ನು ಮುಗಿಸಿ ನಾವು ಸಿನಿಮಾ ರಿಲೀಸ್ ದಿನಾಂಕ ತಿಳಿಸುತ್ತೇವೆ. ಜನರಿಗೋಸ್ಕರ ಸಿನಿಮಾ ಮಾಡಿರೋದು. ಅದನ್ನು ತೋರಿಸಿಯೇ ತೋರಿಸುತ್ತೇವೆ, ಅದೂ ಈ ವರ್ಷವೇ’ ಎಂದಿದ್ದಾರೆ ಅರ್ಜುನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos