ಆ್ಯಪ್-ಆಧಾರಿತ ಆಟೋ ಮತ್ತು ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಗಳು ಆಟೋ ರಿಕ್ಷಾ ಮತ್ತು ಕ್ಯಾಬ್ ಚಾಲಕರನ್ನೂ ಶೋಷಿಸುತ್ತಿವೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 10, 2022 | 1:51 PM

ವರದಿಗಾರ ಲಾಲ್ ಬಾಗ್ ಮೆಟ್ರೋ ಸ್ಟೇಶನ್ ನಿಂದ ಜಯನಗರ ಮೆಟ್ರೋ ಸ್ಟೇಶನ್ ವರೆಗೆ ಒಂದು ಆ್ಯಪ್-ಆಧಾರಿತ ಆಟೋ ಬುಕ್ ಮಾಡಿ ಎರಡು ಕಿಮೀಗಿಂತ ಕಮ್ಮಿಯಿರುವ ದೂರಕ್ಕೆ ರೂ. 76 ತೆತ್ತಿದ್ದಾರೆ!

ಬೆಂಗಳೂರು: ಆ್ಯಪ್-ಆಧಾರಿತ ಕ್ಯಾಬ್ ಸೇವೆ ಒದಗಿಸುವ ಊಬರ್, ಱಪಿಡೊ, ಓಲಾ ಮೊದಲಾದ ಸಂಸ್ಥೆಗಳು ಪ್ರಯಾಣಿಕರನ್ನು ಹೇಗೆ ದೋಚುತ್ತವೆ ಮತ್ತು ಆಟೋ ರಿಕ್ಷಾ (auto rickshaw) ಹಾಗೂ ಕ್ಯಾಬ್ ಡ್ರೈವರ್ ಗಳನ್ನು (cab driver) ಹೇಗೆ ಶೋಷಿಸುತ್ತವೆ ಮತ್ತು ಕನಿಷ್ಟ ದರದ ಬಗ್ಗೆ ಸಾರಿಗೆ ಇಲಾಖೆ (transport department) ಹೊರಡಿಸಿರುವ ಆದೇಶವನ್ನು ಈ ಸಂಸ್ಥೆಗಳು ಎಷ್ಟರಮಟ್ಟಿಗೆ ಪಾಲಿಸುತ್ತಿವೆ ಅನ್ನೋದನ್ನು ಪರೀಕ್ಷಿಸಲು ಟಿವಿ9 ಕನ್ನಡ ಚ್ಯಾನೆಲ್ ತನ್ನ ವರದಿಗಾರರ ಮೂಲಕ ಒಂದು ರಿಯಾಲಿಟಿ ಚೆಕ್ ನಡೆಸಿದೆ. ಈ ವರದಿಗಾರ ಲಾಲ್ ಬಾಗ್ ಮೆಟ್ರೋ ಸ್ಟೇಶನ್ ನಿಂದ ಜಯನಗರ ಮೆಟ್ರೋ ಸ್ಟೇಶನ್ ವರೆಗೆ ಒಂದು ಆ್ಯಪ್-ಆಧಾರಿತ ಆಟೋ ಬುಕ್ ಮಾಡಿ ಎರಡು ಕಿಮೀಗಿಂತ ಕಮ್ಮಿಯಿರುವ ದೂರಕ್ಕೆ ರೂ 76 ತೆತ್ತಿದ್ದಾರೆ. ಇದರಲ್ಲಿ ಅಟೋ ಓಡಿಸುವ ಚಾಲಕನಿಗೆ ಕೇವಲ ರೂ 30 ನೀಡಲಾಗುತ್ತಂತೆ! ಆಟೋ ಚಾಲಕ ಹೇಳೋದನ್ನು ನೀವೇ ಕೇಳಿ.