Apple Education: ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್
ಆ್ಯಪಲ್ ಮ್ಯಾಕ್ಬುಕ್, ಐಪ್ಯಾಡ್, ಮ್ಯಾಕ್ ಮತ್ತು ಅಕ್ಸೆಸ್ಸರಿ ಖರೀದಿಗೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ ಇಎಂಐ ಆಫರ್ ಮತ್ತು ಉಚಿತ ಏರ್ಪಾಡ್ಸ್, ಆ್ಯಪಲ್ ಪೆನ್ಸಿಲ್ ಕೂಡ ದೊರೆಯಲಿದೆ.
ಕಾಲೇಜು ಇನ್ನೇನು ಆರಂಭವಾಗಿದೆ. ವಿದ್ಯಾರ್ಥಿಗಳು ಹೊಸ ತರಗತಿಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಲ್ಯಾಪ್ಟಾಪ್, ಕಂಪ್ಯೂಟರ್, ಟ್ಯಾಬ್ಲೆಟ್ ಅಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ಆ್ಯಪಲ್, ಎಜುಕೇಶನ್ ಸ್ಟೋರ್ ಮೂಲಕ ವಿಶೇಷ ದರಕಡಿತವನ್ನು ಘೋಷಿಸಿದೆ. ಆ್ಯಪಲ್ ಮ್ಯಾಕ್ಬುಕ್, ಐಪ್ಯಾಡ್, ಮ್ಯಾಕ್ ಮತ್ತು ಅಕ್ಸೆಸ್ಸರಿ ಖರೀದಿಗೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ ಇಎಂಐ ಆಫರ್ ಮತ್ತು ಉಚಿತ ಏರ್ಪಾಡ್ಸ್, ಆ್ಯಪಲ್ ಪೆನ್ಸಿಲ್ ಕೂಡ ದೊರೆಯಲಿದೆ. ಸೀಮಿತ ಅವಧಿಗೆ ಈ ಆಫರ್ ಇರಲಿದ್ದು, ಹೊಸ ಮ್ಯಾಕ್, ಐಪ್ಯಾಡ್ ಖರೀದಿಸುವ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.