Apple iPhone 14: ಆ್ಯಪಲ್ ಐಫೋನ್ ಖರೀದಿಗೆ ಅಮೆಜಾನ್ ಪ್ರೈಮ್ ಸೇಲ್ ಭರ್ಜರಿ ಡಿಸ್ಕೌಂಟ್

Apple iPhone 14: ಆ್ಯಪಲ್ ಐಫೋನ್ ಖರೀದಿಗೆ ಅಮೆಜಾನ್ ಪ್ರೈಮ್ ಸೇಲ್ ಭರ್ಜರಿ ಡಿಸ್ಕೌಂಟ್

ಕಿರಣ್​ ಐಜಿ
|

Updated on: Jul 12, 2023 | 5:49 PM

ಐಫೋನ್ 14, 128 ಜಿಬಿ ಸ್ಟೋರೇಜ್ ಮಾದರಿಗೆ ₹79,990 ದರ ನಿಗದಿಪಡಿಸಲಾಗಿತ್ತು. ಆದರೆ ಜುಲೈ 15 ಮತ್ತು 16ರಂದು ನಡೆಯುವ ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ₹66,499ಕ್ಕೆ ಐಫೋನ್ 14 ದೊರೆಯಲಿದೆ. ಅಲ್ಲದೆ, ಐಸಿಐಸಿಐ ಮತ್ತು ಎಸ್​ಬಿಐ ಕಾರ್ಡ್ ಬಳಕೆಗೆ ಹೆಚ್ಚುವರಿ ಡಿಸ್ಕೌಂಟ್ ಪ್ರಯೋಜನ ಕೂಡ ಲಭ್ಯವಾಗಲಿದೆ.

ಅಮೆಜಾನ್ ಪ್ರೈಮ್ ಡೇ ಸೇಲ್ ಆಫರ್​ನಲ್ಲಿ ವಿವಿಧ ಕೊಡುಗೆಗಳನ್ನು ಗ್ರಾಹಕರಿಗೆ ಈಗಾಗಲೇ ಘೋಷಿಸಲಾಗಿದೆ. ಈ ಪೈಕಿ ಹೆಚ್ಚು ಗಮನ ಸೆಳೆಯುತ್ತಿರುವುದು ಆ್ಯಪಲ್ ಐಫೋನ್ 14ಗೆ ನೀಡಿರುವ ಆಫರ್! ಆ್ಯಪಲ್ ಐಫೋನ್ 14 ಖರೀದಿಗೆ ಅಮೆಜಾನ್ ವಿಶೇಷ ಆಫರ್ ನೀಡುತ್ತಿದೆ. ಆ್ಯಪಲ್ ಕಳೆದ ವರ್ಷ ಐಫೋನ್ 14 ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಪೈಕಿ, ಐಫೋನ್ 14, 128 ಜಿಬಿ ಸ್ಟೋರೇಜ್ ಮಾದರಿಗೆ ₹79,990 ದರ ನಿಗದಿಪಡಿಸಲಾಗಿತ್ತು. ಆದರೆ ಜುಲೈ 15 ಮತ್ತು 16ರಂದು ನಡೆಯುವ ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ₹66,499ಕ್ಕೆ ಐಫೋನ್ 14 ದೊರೆಯಲಿದೆ. ಅಲ್ಲದೆ, ಐಸಿಐಸಿಐ ಮತ್ತು ಎಸ್​ಬಿಐ ಕಾರ್ಡ್ ಬಳಕೆಗೆ ಹೆಚ್ಚುವರಿ ಡಿಸ್ಕೌಂಟ್ ಪ್ರಯೋಜನ ಕೂಡ ಲಭ್ಯವಾಗಲಿದೆ.