AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಘೋಷಗಳು ಮೊಳಗುತ್ತಿದ್ದಂತೆ ತನ್ನಿಂದ ತಾನೇ ತೆರೆದುಕೊಳ್ಳುವ ದೇವೀರಮ್ಮ ದೇವಾಲಯದ ಗರ್ಭಗುಡಿ ಬಾಗಿಲು!

ಮಂತ್ರಘೋಷಗಳು ಮೊಳಗುತ್ತಿದ್ದಂತೆ ತನ್ನಿಂದ ತಾನೇ ತೆರೆದುಕೊಳ್ಳುವ ದೇವೀರಮ್ಮ ದೇವಾಲಯದ ಗರ್ಭಗುಡಿ ಬಾಗಿಲು!

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Nov 11, 2026 | 12:14 PM

Share

ಚಿಕ್ಕಮಗಳೂರು ತಾಲೂಕಿನ ಅರಸಿನಗುಪ್ಪೆ ದೇವೀರಮ್ಮ ದೇವಾಲಯದಲ್ಲಿ ದೀಪಾವಳಿ ಅಮಾವಾಸ್ಯೆಯಂದು ಗರ್ಭಗುಡಿಯ ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ. ಶತಮಾನಗಳಿಂದಲೂ ನಡೆಯುತ್ತಿರುವ ಈ ಪವಾಡವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆಧುನಿಕ ಯುಗದಲ್ಲೂ ದೇವಿ ಪವಾಡ ಮಾಡುತ್ತಿದ್ದಾಳೆ ಎಂದು ಲಕ್ಷಾಂತರ ಭಕ್ತರು ಅಚಲವಾಗಿ ನಂಬಿದ್ದಾರೆ. ಇಂದಿನ ವೈಜ್ಞಾನಿಕ ಕಾಲದಲ್ಲೂ ಇಂತಹ ಪವಾಡಗಳನ್ನು ನೋಡುವುದು ಸಾಧ್ಯವೇ ಎಂಬ ಪ್ರಶ್ನೆಗಳಿಗೆ ಅರಸಿನಗುಪ್ಪೆಯ ಈ ಘಟನೆ ಉತ್ತರ ನೀಡುತ್ತದೆ.

ಚಿಕ್ಕಮಗಳೂರು, ನವೆಂಬರ್​​ 11: ತಾಲೂಕಿನ ಅರಸಿನಗುಪ್ಪೆ ಗ್ರಾಮದಲ್ಲಿರುವ ಪ್ರಸಿದ್ಧ ದೇವೀರಮ್ಮ ದೇವಾಲಯದಲ್ಲಿ ಪ್ರತಿವರ್ಷ ದೀಪಾವಳಿ ಅಮಾವಾಸ್ಯೆಯಂದು ಒಂದು ಅಚ್ಚರಿಯ ಘಟನೆ ನಡೆಯುತ್ತದೆ. ಮಂತ್ರ ಘೋಷಗಳು ಮೊಳಗುತ್ತಿದ್ದಂತೆ ದೇವಸ್ಥಾನದ ಗರ್ಭಗುಡಿಯ ಮರದ ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ. ದೇವೀರಮ್ಮ ದೇವಾಲಯಕ್ಕೆ ಬಿಂಡಿಗ ದೇವೀರಮ್ಮ ಸಹೋದರಿ ಅರಸಿನಗುಪ್ಪೆ ದೇವೀರಮ್ಮ ಎಂಬ ಪ್ರತೀತಿಯಿದೆ. ಈ ವಿಶಿಷ್ಟ ಘಟನೆಯು ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿದೆ. ಬಾಗಿಲುಗಳು ತನ್ನಿಂದ ತಾನೇ ತೆರೆದುಕೊಳ್ಳುವ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಭಕ್ತರು ದೀಪಾವಳಿ ವೇಳೆ ಇಲ್ಲಿಗೆ ಆಗಮಿಸುತ್ತಾರೆ. ಆಧುನಿಕ ಯುಗದಲ್ಲೂ ದೇವಿ ಪವಾಡ ಮಾಡುತ್ತಿದ್ದಾಳೆ ಎಂದು ಲಕ್ಷಾಂತರ ಭಕ್ತರು ಅಚಲವಾಗಿ ನಂಬಿದ್ದಾರೆ. ಇಂದಿನ ವೈಜ್ಞಾನಿಕ ಕಾಲದಲ್ಲೂ ಇಂತಹ ಪವಾಡಗಳನ್ನು ನೋಡುವುದು ಸಾಧ್ಯವೇ ಎಂಬ ಪ್ರಶ್ನೆಗಳಿಗೆ ಅರಸಿನಗುಪ್ಪೆಯ ಈ ಘಟನೆ ಉತ್ತರ ನೀಡುತ್ತದೆ. ಮರದ ಗರ್ಭಗುಡಿಯ ಬಾಗಿಲುಗಳು ತಾನಾಗಿಯೇ ತೆರೆಯುವ ಈ ಆಶ್ಚರ್ಯಕರ ದೃಶ್ಯವು ದೇವಿಯ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿದೆ. ಈ ಪವಾಡವು ದೇವಸ್ಥಾನದ ಇತಿಹಾಸ ಮತ್ತು ಭಕ್ತರ ನಂಬಿಕೆಯ ಭಾಗವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Nov 11, 2026 12:11 PM

Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More