Loading video

ನಮಗೆ ಮಗಳ ಭವಿಷ್ಯ ಮುಖ್ಯ, ಹಾಗಾಗಿ ಕಂಡಕ್ಟರ್ ವಿರುದ್ಧ ದಾಖಲಿಸಿದ್ದ ಪೋಕ್ಸೋ ಕೇಸ್ ವಾಪಸ್ಸು ಪಡೆದಿದ್ದೇವೆ: ಬಾಲಕಿಯ ಪಾಲಕರು

|

Updated on: Feb 25, 2025 | 3:20 PM

ಬಾಲಕಿಯ ತಂದೆಯೂ ಹೆಚ್ಚುಕಡಿಮೆ ತನ್ನ ಪತ್ನಿ ಹೇಳಿದ್ದನ್ನೇ ಹೇಳುತ್ತಾರೆ. ಈ ಪ್ರಕರಣದಲ್ಲಿ ಮರಾಠಿ-ಕನ್ನಡ ಅಂತ ವಿವಾದ ಯಾಕೆ ಸೃಷ್ಟಿಯಾಯಿತೋ ಗೊತ್ತಿಲ್ಲ, ತಮ್ಮಿಂದ ಯಾವುದೇ ತಪ್ಪಾಗಿರದಿದ್ದರೂ ಜನರ ಕ್ಷಮೆ ಕೇಳುತ್ತೇವೆ, ಪ್ರಕರಣವನ್ನು ಇಲ್ಲಿಗೆ ಕೈ ಬಿಡಬೇಕೆಂದು ಪ್ರತಿಭಟನೆ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯವರನ್ನು ಕೋರುತ್ತೇವೆ, ತಮಗೆ ಮಗಳ ಭವಿಷ್ಯ ಮುಖ್ಯ ಎಂದು ಅವರು ಹೇಳಿದರು.

ಬೆಳಗಾವಿ: ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಮೂಲಕಾರಣವಾದ ಮತ್ತು ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸು ದಾಖಲಿಸಿ ವಾಪಸ್ಸು ಕೂಡ ಪಡೆದಿರುವ ಕುಟುಂಬದೊಂದಿಗೆ ನಮ್ಮ ಬೆಳಗಾವಿ ವರದಿಗಾರ ಮಾತಾಡಿದ್ದಾರೆ. ಪ್ರಕರಣ ವಿನಾಕಾರಣ ಎಳೆಯಲ್ಪಡುತ್ತಿದೆ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಸಂಘರ್ಷವನ್ನು ಸೃಷ್ಟಿಸುತ್ತಿದೆ ಮತ್ತು ಮಗಳ ಭವಿಷ್ಯಕ್ಕೆ ಪ್ರಕರಣ ತೊಡಕಾಗಬಾರದು ಎನ್ನುವ ದೃಷ್ಟಿಯಿಂದ ಕಂಡಕ್ಟರ್ ವಿರುದ್ಧ ದಾಖಲಿಸಿದ್ದ ಪೋಕ್ಸೋ ಕೇಸನ್ನು ಹಿಂಪಡೆಯಲಾಗಿದೆ ಎಂದು ಬಾಲಕಿಯ ತಾಯಿ ಹೇಳುತ್ತಾರೆ. ಕಂಡಕ್ಟರ್ ಮಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ್ದು ನಿಜ, ತಮ್ಮದು ಕನ್ನಡದ ಕುಟುಂಬ, ಮನೇಲಿ ಎಲ್ಲರೂ ಕನ್ನಡ ಮಾತಾಡುತ್ತೇವೆ, ಮಗಳಿಗೆ ಮಾತ್ರ ಕನ್ನಡ ಬರಲ್ಲ ಎಂದು ಮಹಿಳೆ ಹೇಳುತ್ತಾರೆ. ಮನೆಯಲ್ಲಿ ಎಲ್ಲರೂ ಕನ್ನಡ ಮಾತಾಡಿದರೆ ಬಾಲಕಿಗೆ ಮಾತ್ರ ಹೇಗೆ ಭಾಷೆ ಬರಲ್ಲ ಅನ್ನೋದು ಬೇರೆ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಂಡಕ್ಟರ್ ವಿರುದ್ಧ ಪೋಕ್ಸೋ ಕೈಸ್ ದಾಖಲಿಸಿರುವ ಇನ್ಸ್​ಪೆಕ್ಟರ್ ಕನ್ನಡದವನೋ ಮರಾಠಿಯೋ: ಟಿಎ ನಾರಾಯಣ ಗೌಡ, ಕರವೇ

Published on: Feb 25, 2025 02:41 PM