ಕಂಡಕ್ಟರ್ ವಿರುದ್ಧ ಪೋಕ್ಸೋ ಕೈಸ್ ದಾಖಲಿಸಿರುವ ಇನ್ಸ್ಪೆಕ್ಟರ್ ಕನ್ನಡದವನೋ ಮರಾಠಿಯೋ: ಟಿಎ ನಾರಾಯಣ ಗೌಡ, ಕರವೇ
ಪರೋಕ್ಷವಾಗಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ದಾಳಿ ಮಾಡಿದ ನಾರಾಯಣ ಗೌಡ, ಎಂಇಎಸ್ ಪುಂಡರ ವಿರುದ್ಧ ಬೆಳಗಾವಿಯ ರಾಜಕಾರಣಿಗಳು ಯಾವತ್ತೂ ಮಾತಾಡಲಾರರು, ಅವರ ವೋಟುಗಳು ಇವರಿಗೆ ಬೇಕಿದೆ, ಸಂಗೊಳ್ಳಿ ರಾಯಣ್ಣನ ಹಾಗೆ ಇವರು ಸ್ವಾಭಿಮಾನದಿಂದ ಬದುಕಲಾರರು, ಇವರ ನಿರ್ಲಿಪ್ತ ಧೋರಣೆ ಮುಂದುವರಿದರೆ ಬೆಂಗಳೂರಿಗೆ ಬರೋದು ದುಸ್ತರವಾದೀತು ಎಂದು ಎಚ್ಚರಿಸಿದರು.
ಬೆಳಗಾವಿ: ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ನಡೆಸಿದ ಹಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅಗ್ರಹಿಸಿತು ಮತ್ತು ಬೆಳಗಾವಿಯ ಸಚಿವರು ಮತ್ತು ಶಾಸಕರನ್ನು ಎಚ್ಚರಿಸಿತು. ಈ ಸಂದರ್ಭದಲ್ಲಿ ಮಾತಾಡಿದ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ, ಕಂಡಕ್ಟರ್ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ, ರಾತ್ರೋರಾತ್ರಿ ಅದನ್ನು ಮಾಡಿದ್ದು ಯಾರು? ಕಾಣದ ಕೈಗಳು ಇಲ್ಲಿ ಕೆಲಸ ಮಾಡಿವೆ, ಕೇಸನ್ನು ದಾಖಲು ಮಾಡಿರುವ ಪೊಲೀಸ್ ಇನ್ಸ್ಪೆಕ್ಟರ್ ಮುಖಕ್ಕೆ ಎರಡು ಬಿಗಿಯಬೇಕು, ಅದ್ಹೇಗೆ ಅವನು ಪೋಕ್ಸೋ ಕೇಸನ್ನು ದಾಖಲಿಸುತ್ತಾನೆ? ಅವನೇನು ಕನ್ನಡಿಗನೋ ಅಥವಾ ಮಹಾರಾಷ್ಟ್ರದವನೋ? ಪೊಲೀಸ್ ಕಮೀಷನರ್ ಕೂಡಲೇ ಕಂಡಕ್ಟರ್ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ಪಡೆಯಬೇಕು ಮತ್ತು ಗೃಹ ಸಚಿವರು ತಮ್ಮ ರಾಜಕೀಯ ದೊಂಬರಾಟವನ್ನು ಪಕ್ಕಕ್ಕಿಟ್ಟು ಬೆಳಗಾವಿ ಕನ್ನಡಿಗರ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಸ್ ಕಂಡಕ್ಟರ್ ವಿರುದ್ಧ ಉದ್ದೇಶಪೂರ್ವಕವಾಗಿ ಪೋಕ್ಸೋ ಕೇಸ್ ದಾಖಲಿಸಲಾಗಿದೆ ಅನಿಸುತ್ತಿದೆ: ಉಮಾಶ್ರೀ