ಅಡಿಕೆ‌ ಬೆಳೆಗೆ ರೋಗ: ಸಂಕಷ್ಟದಲ್ಲಿ ಬೆಳೆಗಾರ, ಊರುಬಿಟ್ಟ ಒಂದೇ ಗ್ರಾಮದ 18 ಕುಟುಂಬ, ಲ್ಯಾಂಡ್ ಮಾಫಿಯಾ ಕೈಚಳಕ ಜೋರು

| Updated By: ಸಾಧು ಶ್ರೀನಾಥ್​

Updated on: Aug 23, 2023 | 10:57 AM

ಅಡಿಕೆ ಬೆಳಗೆ ನಿರಂತರವಾಗಿ ಎಲೆಚುಕ್ಕಿ ರೋಗದ ಜೊತೆಗೆ ಹಳದಿ‌ರೋಗ ಹೆಚ್ಚಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕಳಸ, ಕೊಪ್ಪ ,N.R ಪುರ ಭಾಗದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕಣ್ಣ ಮುಂದೆಯೇ ಅಡಿಕೆ ಮರಗಳು ನಾಶವಾಗುತ್ತಿದ್ದರೂ ಅಡಿಕೆ ಮರಗಳನ್ನ ರಕ್ಷಿಸಿಕೊಳ್ಳಲು ಯಾವುದೇ ಔಷಧಿಗಳಿಲ್ಲದೆ ಕೈ ಚೆಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಬೆಳೆ ನಂಬಿ ಬದುಕು ಕಟ್ಟಿಕೊಂಡಿದ್ದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಊರುಗಳನ್ನ ಬಿಡುತ್ತಿದ್ದು, ಮನೆ ಅಡಿಕೆ ತೋಟವನ್ನ ಮಾರಿ ಪಟ್ಟಣ ಸೇರಿ ಕೆಲಸ ಮಾಡುತ್ತಿದ್ದಾರೆ.

ಚಿಕ್ಕಮಗಳೂರು: ಮಲೆನಾಡು ಭಾಗದ ಅಡಿಕೆ ಬೆಳೆಗಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಹಳದಿ ರೋಗ, ಎಲೆಚುಕ್ಕಿ ರೋಗ ಅಡಿಕೆ ಬೆಳೆಗಾರರ ಬದುಕನನ್ನ ಛಿದ್ರಮಾಡಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಳದಿ ರೋಗ ಎಲೆಚುಕ್ಕಿ ರೋಗಕ್ಕೆ ಅಡಿಕೆ ಬೆಳೆ (Arecanut crop disease) ನಾಶವಾಗಿದ್ದು, ಅರ್ಥಿಕ ಸಂಕಷ್ಟದಿಂದಾಗಿ.. ಹುಟ್ಟಿಬೆಳೆದ ಊರಿನ ಮನೆ, ಅಡಿಕೆ ತೋಟ ಮಾರಿ ಅಡಿಕೆ ಬೆಳೆಗಾರರು ಊರು ಬಿಡುತ್ತಿದ್ದಾರೆ…. ಅಡಿಕೆ ಬೆಳಗೆ ನಿರಂತರವಾಗಿ ಎಲೆಚುಕ್ಕಿ ರೋಗದ ಜೊತೆಗೆ ಹಳದಿ‌ರೋಗ ಹೆಚ್ಚಾಗಿದ್ದು ಚಿಕ್ಕಮಗಳೂರು (Chikkamagalur) ಜಿಲ್ಲೆಯ ಶೃಂಗೇರಿ, ಕಳಸ, ಕೊಪ್ಪ ,N.R ಪುರ ಭಾಗದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ (Farmers in trouble). ಕಣ್ಣ ಮುಂದೆಯೇ ಅಡಿಕೆ ಮರಗಳು ನಾಶವಾಗುತ್ತಿದ್ದರೂ ಅಡಿಕೆ ಮರಗಳನ್ನ ರಕ್ಷಿಸಿಕೊಳ್ಳಲು ಯಾವುದೇ ಔಷಧಿಗಳಿಲ್ಲದೆ ಕೈ ಚೆಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಬೆಳೆ ನಂಬಿ ಬದುಕು ಕಟ್ಟಿಕೊಂಡಿದ್ದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಊರುಗಳನ್ನ ಬಿಡುತ್ತಿದ್ದು, ಮನೆ ಅಡಿಕೆ ತೋಟವನ್ನ ಮಾರಿ ಪಟ್ಟಣ ಸೇರಿ ಕೆಲಸ ಮಾಡುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಊರು ಬಿಟ್ಟ ಒಂದೇ ಗ್ರಾಮದ18 ಕುಟುಂಬ :

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೆಳವಿನ ಕೊಡಿಗೆ ಗ್ರಾಮದ ಅಡಿಕೆ ಬೆಳೆಗಾರರು ಒಬ್ಬರೇ ಊರು ಬಿಡುವ ಸ್ಥಿತಿ ತಲುಪಿದೆ. ಬೆಳವಿನಕೊಡಿಗೆ ಗ್ರಾಮದಲ್ಲಿದ್ದ 40 ಮನೆಗಳ ಪೈಕಿ 18 ಕುಟುಂಬಗಳು ಅಡಿಕೆ ತೋಟ ಮನೆಯನ್ನ ಮಾರಿ ಪಟ್ಟಣ ಸೇರಿದ್ದಾರೆ . ಅಡಿಕೆ ಬೆಳಗೆ ಹೆಚ್ಚಾದ ಹಳದಿ, ಎಲೆಚುಕ್ಕಿ ರೋಗದಿಂದ ಬೆಳೆ ನಾಶವಾಗಿ ಬೆಳೆಗಾರರು ಅರ್ಥಿಕ ಸಂಕಷ್ಟಕ್ಕೆ ಸಿಲುಕಿ ಮನೆ ಅಡಿಕೆ ತೋಟವನ್ನ ಮಾರಿ ಊರು ಬಿಟ್ಟು ಪಟ್ಟಣ ಸೇರುತ್ತಿರುವ ಅಘಾತಕಾರಿ ಅಂಶ ಮಲೆನಾಡಿನಲ್ಲಿ ಬೆಳಕಿಗೆ ಬಂದಿದೆ

ಸರ್ಕಾರದ ನಿರ್ಲಕ್ಷ, ಕೋಟ್ಯಾಂತರ ಅಡಿಕೆ ಬೆಳೆಗಾರರು ಕಂಗಾಲು

ವರ್ಷದಿಂದ ವರ್ಷಕ್ಕೆ ವಾಣಿಜ್ಯ ಬೆಳೆ ಅಡಿಕೆಗೆ ಹಳದಿ ರೋಗ ,ಎಲೆಚುಕ್ಕಿ ರೋಗ ಹೆಚ್ಚಾಗಿದ್ದು ಅಡಿಕೆ ಬೆಳೆ ಮಲೆನಾಡು ಭಾಗದಲ್ಲಿ ನಾಶವಾಗುತ್ತಿದ್ರು ಸರ್ಕಾರ ಯಾವುದೇ ಕ್ರ‌ಮಕ್ಕೂ ಮುಂದಾಗಿಲ್ಲ. ಅಡಿಕೆ ಬೆಳೆಗೆ ತಗುಲಿರುವ ಹಳದಿ ರೋಗ ಎಲೆಚುಕ್ಕಿ ರೋಗ ನಿಯಂತ್ರಿಸುವ ಔಷಧಿಗಳನ್ನೂ ಇಲ್ಲಿಯ ವರೆಗೂ ತಯಾರಿಸಿಲ್ಲ. ರೋಗ ನಿಯಂತ್ರಿಸುವ ಔಷಧಿಗಳೆ ಇಲ್ಲದೆ ಅಡಿಕೆ ರೋಗ ಹೆಚ್ಚುತ್ತಿದ್ದು ಅಡಿಕೆ ಬೆಳೆಗಾರರು ಕಂಗಲಾಗಿದ್ದಾರೆ.

ಮಲೆನಾಡಿನಲ್ಲಿ ಹೆಚ್ಚಿದ ಲ್ಯಾಂಡ್ ಮಾಫಿಯಾ:

ಸಂಕಷ್ಟದಲ್ಲಿ ಇರುವ ಅಡಿಕೆ ಬೆಳೆಗಾರರ ಸ್ಥಿತಿಯನ್ನ ಬಳಸಿಕೊಳ್ಳುತ್ತಿರುವ ಲ್ಯಾಂಡ್‌ ಮಾಫಿಯಾ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಗ್ರಾಮದಲ್ಲಿ ಅಡಿಕೆ ತೋಟ ಖರೀದಿ ಮಾಡಿ ಬೆಂಗಳೂರು ಸೇರಿದಂತೆ ಹೊರ ರಾಜ್ಯದ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳಿಗೆ ಮಾರಾಟ ಮಾಡುತ್ತಿವೆ. ಮೊದಲೇ ಅರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಡಿಕೆ ಬೆಳೆಗಾರರು ಕಡಿಮೆ ಬೆಲೆಗೆ ಅಡಿಕೆ ತೋಟ ,ಮನೆ ಮಾರಟ ಮಾಡಿ ಪಟ್ಟಣ ಸೇರುತ್ತಿದ್ದಾರೆ..

ಅಡಿಕೆ ಬೆಳೆ ಉಳಿಸಲಾಗದೆ ಕೈ ಚೆಲ್ಲಿದ ಬೆಳೆಗಾರರು:

ಮಲೆನಾಡು ಭಾಗದ ಅಡಿಕೆ ಬೆಳೆಗಾರರು ಹಳದಿ ಎಲೆ ರೋಗ, ಎಲೆಚುಕ್ಕಿ ರೋಗದಿಂದ ಅಡಿಕೆ ಮರಗಳನ್ನ ರಕ್ಷಿಸಲಾಗದೆ ಕೈ ಚೆಲ್ಲಿ ಅಡಿಕೆ ತೋಟಗಳನ್ನ ಪಾಳು ಬಿಡುತ್ತಿದ್ದು ಮಲೆನಾಡು ಭಾಗವಾದ ಶೃಂಗೇರಿ, ಕೊಪ್ಪ ಕಳಸ, N.R ಪುರ ತಾಲೂಕಿನಾದ್ಯಂತ ಸಾವಿರಾರು ಎಕರೆ ಅಡಿಕೆ ತೋಟಗಳು ಪಾಳು ಬಿದಿದ್ದು. ಅಡಿಕೆ ತೋಟವನ್ನ ಮಾರಾಟಕ್ಕೆ ಬೆಳೆಗಾರರು ಸಿದ್ದತೆ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow us on