ಕೆಜಿಎಫ್ನಲ್ಲಿ ತಮಿಳುನಾಡಿಗೆ ಸೇರಿದ ಒಂದೇ ನಂಬರ್ನ ಎರಡು ಖಾಸಗಿ ಬಸ್! ಆರ್ಟಿಒ ಅಧಿಕಾರಿಗಳಿಂದ ಜಫ್ತಿ
ಕೋಲಾರ: ಕೆಜಿಎಫ್ನಲ್ಲಿ ಒಂದೇ ರಿಜಿಸ್ಟ್ರೇಷನ್ ನಂಬರ್ನ ಎರಡು ಖಾಸಗಿ ಬಸ್ಗಳನ್ನು ಆರ್ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ತಮಿಳುನಾಡಿನ ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್ಗೆ ಸೇರಿದ ಈ 2 ಬಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದೇ ನಂಬರ್ ಅನ್ನು ಎರಡು ಬಸ್ಗಳಿಗೆ ಹಾಕಿಕೊಂಡು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರುವ ಪ್ರಕರಣ ಇದಾಗಿದೆ.
ಕೋಲಾರ, ಆಗಸ್ಟ್ 23: ಕೆಜಿಎಫ್ನಲ್ಲಿ ಒಂದೇ ರಿಜಿಸ್ಟ್ರೇಷನ್ ನಂಬರ್ನ (registrarion number) ಎರಡು ಖಾಸಗಿ ಬಸ್ಗಳನ್ನು ಆರ್ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ (Confiscation). ತಮಿಳುನಾಡಿನ ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್ಗೆ ಸೇರಿದ ಈ 2 ಬಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದೇ ರಿಜಿಸ್ಟ್ರೇಷನ್ ನಂಬರ್ ಅನ್ನು ಎರಡು ಬಸ್ಗಳಿಗೆ (bus) ಹಾಕಿಕೊಂಡು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರುವ ಪ್ರಕರಣ ಇದಾಗಿದೆ. ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಗೆ ಸೇರಿದ ರಸ್ತೆ ಸಾರಿಗೆ ಸಂಸ್ಥೆಯ (ಆರ್.ಟಿ.ಓ) ಅಧಿಕಾರಿಗಳು (KGF, RTO) ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಸ್ಗಳ ರಿಜಿಸ್ಟ್ರೇಷನ್ ನಂಬರ್ ತಮಿಳುನಾಡಿಗೆ ಸೇರಿದ್ದಾಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ