ರಾಯಚೂರು: ಚಂದ್ರಯಾನ 3ರ ಯಶಸ್ಸಿಗಾಗಿ ಚಂದ್ರಶೇಖರನಿಗೆ ಹಾಲಿನ ಅಭಿಷೇಕ ಮಾಡಿದ ಮಕ್ಕಳು

ರಾಯಚೂರು: ಚಂದ್ರಯಾನ 3ರ ಯಶಸ್ಸಿಗಾಗಿ ಚಂದ್ರಶೇಖರನಿಗೆ ಹಾಲಿನ ಅಭಿಷೇಕ ಮಾಡಿದ ಮಕ್ಕಳು

ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು

Updated on:Aug 23, 2023 | 10:11 AM

Chandrayaan-3: ರಾಯಚೂರು ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಚಂದ್ರಯಾನ 3 ಯಶಸ್ಸಿಗಾಗಿ ಮಕ್ಕಳು ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮಕ್ಕಳು ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಿ ಚಂದ್ರಯಾನ-3 ಸಕ್ಸಸ್ ಗಾಗಿ ಪ್ರಾರ್ಥಿನಿಸಿದ್ದಾರೆ. ವಿವಿಧ ಸ್ತೋತ್ರಗಳನ್ನ ಹೇಳೋ ಮೂಲಕ ಚಂದ್ರಯಾನ-3 ಭಾರತ ಹೊಸ ಮೈಲು ಗಲ್ಲು ಸಾಧಿಸಲಿ. ಅತೀ ದೊಡ್ಡ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿ ಅಂತ ಪ್ರಾರ್ಥನೆ ಮಾಡಿದ್ದಾರೆ.

ರಾಯಚೂರು, ಆ.23: ಇಡೀ ದೇಶವೇ ಕಾಯುತ್ತಿರುವ ಕ್ಷಣ ಸಮೀಪಿಸುತ್ತಿದೆ. ಇಂದು ಸಂಜೆ ವಿಕ್ರಮ್ ಲ್ಯಾಂಡರ್ ಚಂದ್ರನ ನೆಲದ ಮೇಲೆ ಇಳಿಯಲಿದೆ. ಹೀಗಾಗಿ ಚಂದ್ರಯಾನ್ 3 ಯಶಸ್ಸಿಗಾಗಿ ದೇಶಾದ್ಯಂತ ಮಂದಿರ-ಮಸೀದಿಗಳಲ್ಲಿ ಪೂಜೆ ನಡೆಯುತ್ತಿದೆ. ಸದ್ಯ ರಾಯಚೂರು ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಚಂದ್ರಯಾನ 3 ಯಶಸ್ಸಿಗಾಗಿ ಮಕ್ಕಳು ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ.

ವಿವಿಧ ಏರಿಯಾಗಳ ಮಕ್ಕಳು ಒಂದಾಗಿ ಚಂದ್ರಯಾನ 3 ಸಕ್ಸಸ್​ಗಾಗಿ ಚಂದ್ರಶೇಖರನಿಗೆ ಪೂಜೆ-ಪುನಸ್ಕಾರ ಮಾಡಿ ಹಾಲಿನ ಅಭಿಷೇಕ ಮಾಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮಕ್ಕಳು ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಿ ಚಂದ್ರಯಾನ-3 ಸಕ್ಸಸ್ ಗಾಗಿ ಪ್ರಾರ್ಥಿನಿಸಿದ್ದಾರೆ. ವಿವಿಧ ಸ್ತೋತ್ರಗಳನ್ನ ಹೇಳೋ ಮೂಲಕ ಚಂದ್ರಯಾನ-3 ಭಾರತ ಹೊಸ ಮೈಲು ಗಲ್ಲು ಸಾಧಿಸಲಿ. ಅತೀ ದೊಡ್ಡ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿ ಅಂತ ಪ್ರಾರ್ಥನೆ ಮಾಡಿದ್ದಾರೆ.

Published on: Aug 23, 2023 10:09 AM