AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಇದು ನಿಜಕ್ಕೂ ಸರ್​ಪ್ರೈಸಿಂಗ್ ಆಗಿತ್ತು’; ‘ಜೈಲರ್’ ಚಿತ್ರದ ನರಸಿಂಹನ ಪಾತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಶಿವಣ್ಣ ಖುಷ್

‘ನನಗೆ ಇದು ನಿಜಕ್ಕೂ ಸರ್​ಪ್ರೈಸಿಂಗ್ ಆಗಿತ್ತು’; ‘ಜೈಲರ್’ ಚಿತ್ರದ ನರಸಿಂಹನ ಪಾತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಶಿವಣ್ಣ ಖುಷ್

ರಾಜೇಶ್ ದುಗ್ಗುಮನೆ
|

Updated on: Aug 23, 2023 | 8:35 AM

Share

‘ಜೈಲರ್’ ಸಿನಿಮಾ ಮೂಲಕ ಶಿವರಾಜ್​ಕುಮಾರ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಪರಭಾಷೆಯಲ್ಲೂ ಅವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜ್​ಕುಮಾರ್, ‘ನನಗೆ ಇದು ನಿಜಕ್ಕೂ ಸರ್​ಪ್ರೈಸಿಂಗ್ ಆಗಿತ್ತು. ನಾನು ಮಾಡಿರೋ ಪಾತ್ರಕ್ಕೆ ಈ ಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದುಕೊಂಡಿರಲಿಲ್ಲ’ ಎಂದಿದ್ದಾರೆ ಅವರು.

‘ಜೈಲರ್’ ಚಿತ್ರದಲ್ಲಿ ಶಿವರಾಜ್​ಕುಮಾರ್ ಅವರು ನರಸಿಂಹನ ಪಾತ್ರದ ಮೂಲಕ ಗಮನ ಸೆಳೆದರು. ಈ ಚಿತ್ರದ ಮೂಲಕ ಶಿವರಾಜ್​ಕುಮಾರ್ (Shivarajkumar) ಅವರು ಎಲ್ಲರ ಗಮನ ಸೆಳೆದಿದ್ದಾರೆ. ಪರಭಾಷೆಯಲ್ಲೂ ಅವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜ್​ಕುಮಾರ್, ‘ನನಗೆ ಇದು ನಿಜಕ್ಕೂ ಸರ್​ಪ್ರೈಸಿಂಗ್ ಆಗಿತ್ತು. ನಾನು ಮಾಡಿರೋ ಪಾತ್ರಕ್ಕೆ ಈ ಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ನನ್ನನ್ನು ಮೆಚ್ಚಿಕೊಂಡಿದ್ದಾರೆ. ಅದು ಸಹಜ. ಆದರೆ, ಕೇರಳ, ತಮಿಳುನಾಡು, ಆಂಧ್ರದಲ್ಲಿ ನನ್ನ ಪಾತ್ರಕ್ಕೆ ಈ ಮಟ್ಟದ ಮೆಚ್ಚುಗೆ ಸಿಗುತ್ತಿರುವುದು ಖುಷಿ ನೀಡಿದೆ’ ಎಂದಿದ್ದಾರೆ ಶಿವರಾಜ್​ಕುಮಾರ್. ಜೊತೆಗೆ ರಜನಿಕಾಂತ್, ಸನ್​ ಪಿಕ್ಚರ್ಸ್ ಹಾಗೂ ನೆಲ್ಸನ್ ದಿಲೀಪ್​ಕುಮಾರ್​ಗೆ ಧನ್ಯವಾದ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More