‘ಜಾಲಿವುಡ್’ಗೆ ಶುಭಕೋರಿದ ಶಿವರಾಜ್ಕುಮಾರ್, ಡಿಕೆಶಿ; ಇಲ್ಲಿದೆ ಹತ್ತು ಹಲವು ಬಗೆಯ ಮನರಂಜನೆ
‘ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್.. ಹೀಗೆ ಎಲ್ಲವೂ ಒಂದೆಡೆ ಬಂದು ಸೇರುವ ಸ್ಥಳವೇ ಜಾಲಿವುಡ್. ಹಿಂದೆ ಇದೇ ಜಾಗದಲ್ಲಿ ನಾನು ಸಾಕಷ್ಟು ಸಿನಿಮಾಗಳ ಶೂಟಿಂಗ್ನಲ್ಲಿ ಭಾಗಿ ಆಗಿದ್ದೆ. ಅದೆಲ್ಲ ಈಗ ನೆನಪಿಗೆ ಬರುತ್ತಿದೆ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ಆಗಸ್ಟ್ 27ರಿಂದ ಈ ಥೀಮ್ ಪಾರ್ಕ್ ಕಾರ್ಯಾರಂಭ ಮಾಡಲಿದೆ.
ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವೇಲ್ಸ್ ಗ್ರೂಪ್‌ನ ಸಂಸ್ಥಾಪಕ ಐಶರಿ ಕೆ. ಗಣೇಶ್ ಅವರು ಬಿಡದಿ ಬಳಿ ‘ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್’ (Jollywood) ಆರಂಭಿಸಿದ್ದಾರೆ. ಇತ್ತೀಚೆಗೆ ಇದರ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಸಾಕ್ಷಿಯಾದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar), ಸ್ಯಾಂಡಲ್ವುಡ್ ನಟ ಶಿವರಾಜಕುಮಾರ್, ಸಂಸದ ಡಿ.ಕೆ. ಸುರೇಶ್, ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಮುಂತಾದವರು ಅತಿಥಿಗಳಾಗಿ ಬಂದು ‘ಜಾಲಿವುಡ್’ಗೆ ಶುಭ ಕೋರಿದರು. ಇದೊಂದು ಸ್ಟುಡಿಯೋ ಮತ್ತು ಥೀಮ್ ಪಾರ್ಕ್ ಆಗಿದ್ದು. ಇದರಲ್ಲಿ ಹತ್ತು ಹಲವು ಬಗೆಯ ಮನರಂಜನೆ ಸಿಗಲಿದೆ. ಇದೇ ಜಾಗದಲ್ಲಿ ಶೂಟಿಂಗ್ ಮಾಡಿದ ಹಳೆಯ ದಿನಗಳಲ್ಲಿ ಶಿವರಾಜ್ಕುಮಾರ್ (Shivarajkumar) ನೆನಪು ಮಾಡಿಕೊಂಡರು.
ಆಗಸ್ಟ್ 27ರಿಂದ ‘ಜಾಲಿವುಡ್’ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಆ ಬಗ್ಗೆ ಐಶರಿ ಕೆ. ಗಣೇಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ರೀತಿಯ ಒಂದು ಥೀಮ್ ಪಾರ್ಕ್ ಮಾಡಬೇಕು ಎಂಬುದು ಅವರ ಬಹುವರ್ಷಗಳ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ‘ಕಳೆದ 30 ವರ್ಷಗಳಿಂದ ನಾವು ಆರೋಗ್ಯ, ಶಿಕ್ಷಣ, ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದೇವೆ. ಕುಟುಂಬದವರೆಲ್ಲ ಒಟ್ಟಾಗಿ ಖುಷಿಯಿಂದ ಸಮಯ ಕಳೆಯುವಂಥ ಒಂದು ಥೀಮ್ ಪಾರ್ಕ್ ನಿರ್ಮಿಸಬೇಕು ಎಂಬುದು ನನ್ನ ಆಸೆ ಆಗಿತ್ತು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪರಭಾಷಿಗರಿಗೂ ಹತ್ತಿರವಾದ ಶಿವರಾಜ್ಕುಮಾರ್; ಹ್ಯಾಟ್ರಿಕ್ ಹೀರೋಈ ಖದರ್ಗೆ ಭರಪೂರ ಮೆಚ್ಚುಗೆ
‘ಕಳೆದ 2 ವರ್ಷಗಳ ಕಾಲದಿಂದ ಈ ಪ್ರಕ್ರಿಯೆ ನಡೆಯುತ್ತಿತ್ತು. ಫಿಲ್ಮ್ ಸಿಟಿಯನ್ನು ನವೀಕರಿಸಿರುವುದು ಮಾತ್ರವಲ್ಲದೇ ಅನೇಕ ರೀತಿಯ ಮನರಂಜನೆಯ ಆಟಗಳನ್ನು ಆರಂಭಿಸಿದ್ದೇವೆ. ಭಾರತೀಯ ಚಿತ್ರರಂಗಕ್ಕೆ ಇದನ್ನು ಅರ್ಪಿಸುತ್ತೇವೆ. ನಮ್ಮ ಈ ಪಾರ್ಕ್ನಲ್ಲಿ 33 ಮುಖ್ಯ ಆಕರ್ಷಣೆಗಳು ಇವೆ. ಜಾಲಿವುಡ್ಗೆ ಬರುವ ಜನರಿಗೆ ಮನರಂಜನೆ ಗ್ಯಾರಂಟಿ’ ಎಂದಿದ್ದಾರೆ ಐಶರಿ ಕೆ. ಗಣೇಶ್. ‘ಕಳೆದ 4 ವರ್ಷಗಳಿಂದ ನಾನು ಯಾವುದೇ ಖಾಸಗಿ ಕಾರ್ಯಕ್ರಮಗಳ ಉದ್ಘಾಟನೆ ಹೋಗಿರಲಿಲ್ಲ. ಇದೇ ಮೊದಲು ಇಲ್ಲಿಗೆ ಬಂದಿದ್ದೇನೆ. ‘ಜಾಲಿವುಡ್’ ತುಂಬ ಚೆನ್ನಾಗಿದೆ. ಬೆಂಗಳೂರು ಮತ್ತು ಬೇರೆ ಊರುಗಳ ಜನರು ಇದನ್ನು ನೋಡಿ ಖುಷಿಪಡಲಿ’ ಎಂದು ಡಿ.ಕೆ. ಶಿವಕುಮಾರ್ ಅವರು ಶುಭ ಕೋರಿದ್ದಾರೆ.
ಇದನ್ನೂ ಓದಿ: ‘ಬಿಗ್ ಡ್ಯಾಡಿ’ ಜೊತೆ ಬರ್ತಾನೆ ‘ಬೀರ್ಬಲ್’: ಮುಗಿಯಿತು ಶಿವರಾಜ್ಕುಮಾರ್ ನಟನೆಯ ‘ಘೋಸ್ಟ್’ ಚಿತ್ರೀಕರಣ
ಸಂಸದ ಡಿ.ಕೆ. ಸುರೇಶ್, ಶಾಸಕ ಬಾಲಕೃಷ್ಣ ಕೂಡ ‘ಜಾಲಿವುಡ್’ಗೆ ಶುಭ ಹಾರೈಸಿದರು. ಈ ವೇಳೆ ಸಿ.ಇ.ಓ. ಆರವ್ ಕೂಡ ಉಪಸ್ಥಿತರಿದ್ದರು. ಈ ಥೀಮ್ ಪಾರ್ಕ್ ಬಗ್ಗೆ ಶಿವಣ್ಣ ಮಾತನಾಡಿದರು. ‘ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್.. ಹೀಗೆ ಎಲ್ಲವೂ ಒಂದೆಡೆ ಬಂದು ಸೇರುವ ಸ್ಥಳವೇ ಜಾಲಿವುಡ್. ಹಿಂದೆ ಇದೇ ಜಾಗದಲ್ಲಿ ನಾನು ಸಾಕಷ್ಟು ಸಿನಿಮಾಗಳ ಶೂಟಿಂಗ್ನಲ್ಲಿ ಭಾಗಿ ಆಗಿದ್ದೆ. ಅದೆಲ್ಲ ಈಗ ನೆನಪಿಗೆ ಬರುತ್ತಿದೆ’ ಎಂದರು ಶಿವರಾಜ್ಕುಮಾರ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.