‘ನನ್ನ ಮಗ ಹೀರೋ ಆಗಲ್ಲ’; ಸ್ಪಷ್ಟನೆ ನೀಡಿದ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ

ಪವನ್ ಕಲ್ಯಾಣ್ ಟಾಲಿವುಡ್​ನ ಸ್ಟಾರ್ ಹೀರೋ. ಅವರ ಎರಡನೇ ಪತ್ನಿ ರೇಣು ದೇಸಾಯಿಗೆ ಅಕಿರಾ ಹೆಸರಿನ ಮಗ ಇದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಡುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದಕ್ಕೆ ಕಾರಣ ನಿರ್ದೇಶಕ ರಾಘವೇಂದ್ರ ರಾವ್. ಅವರು ಇತ್ತೀಚೆಗೆ ಮೊಮ್ಮಗ ಕಾರ್ತಿಕೇಯ ಹಾಗೂ ಅಕಿರಾ ನಂದನ್ ಜೊತೆ ಪೋಸ್ ನೀಡಿದ್ದರು.

‘ನನ್ನ ಮಗ ಹೀರೋ ಆಗಲ್ಲ’; ಸ್ಪಷ್ಟನೆ ನೀಡಿದ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ
ಪವನ್​ ಕಲ್ಯಾಣ್​, ಅಕಿರ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Aug 22, 2023 | 5:54 PM

ಸ್ಟಾರ್ ನಟ-ನಟಿಯರ ಮಕ್ಕಳು ಚಿತ್ರರರಂಗಕ್ಕೆ ಬರೋದು ಹೊಸದೇನೂ ಅಲ್ಲ. ಈ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಬಾಲಿವುಡ್, ಟಾಲಿವುಡ್, ಸ್ಯಾಂಡಲ್​ವುಡ್ ಸೇರಿ ಎಲ್ಲಾ ಕಡೆಗಳಲ್ಲಿ ಇದು ಚಾಲ್ತಿಯಲ್ಲಿದೆ. ಈಗ ಪವನ್ ಕಲ್ಯಾಣ್ (Pawan Kalyan) ಮಗ ಅಕಿರಾ (Akira) ಕೂಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ (Renu Desai) ಅಲ್ಲಗಳೆದಿದ್ದಾರೆ. ‘ಅವನಿಗೆ ನಟನೆಯ ಬಗ್ಗೆ ಸದ್ಯಕ್ಕಂತೂ ಆಸಕ್ತಿ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಎಳೆದಿದ್ದಾರೆ.

ಪವನ್ ಕಲ್ಯಾಣ್ ಟಾಲಿವುಡ್​ನ ಸ್ಟಾರ್ ಹೀರೋ. ಅವರ ಎರಡನೇ ಪತ್ನಿ ರೇಣು ದೇಸಾಯಿಗೆ ಅಕಿರಾ ಹೆಸರಿನ ಮಗ ಇದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಡುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದಕ್ಕೆ ಕಾರಣ ನಿರ್ದೇಶಕ ರಾಘವೇಂದ್ರ ರಾವ್. ಅವರು ಇತ್ತೀಚೆಗೆ ಮೊಮ್ಮಗ ಕಾರ್ತಿಕೇಯ ಹಾಗೂ ಅಕಿರಾ ನಂದನ್ ಜೊತೆ ಪೋಸ್ ನೀಡಿದ್ದರು. ಅಕಿರಾ ಶೀಘ್ರವೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂದೆಲ್ಲ ಸುದ್ದಿ ಹರಿದಾಡಿದವು.

ಇದನ್ನೂ ಓದಿ: ಪವನ್ ಕಲ್ಯಾಣ್ ಕುರಿತು ವೆಬ್ ಸರಣಿ: ಮನವಿ ಮಾಡಿದ ಪವನ್​ ಮಾಜಿ ಪತ್ನಿ

ಈ ವಿಚಾರ ರೇಣು ದೇಸಾಯಿ ಗಮನಕ್ಕೂ ಬಂದಿದೆ. ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಅಕಿರಾಗೆ ಸದ್ಯ ನಟನೆಯ ಬಗ್ಗೆ ಆಸಕ್ತಿ ಇಲ್ಲ. ಹೀರೋ ಆಗಲು ಅವನು ಆಸಕ್ತಿ ತೋರಿಸುತ್ತಿಲ್ಲ. ಈಗಲೇ ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ. ನಾನು ಏನಾದರೂ ಪೋಸ್ಟ್ ಮಾಡಿದರೆ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಅವನು ನಟನೆಗೆ ಬರೋಕೆ ನಿರ್ಧಾರ ಮಾಡಿದರೆ ನಾನು ಮೊದಲು ಆ ವಿಚಾರವನ್ನು ನಿಮಗೆ ತಿಳಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಪವನ್ ಕಲ್ಯಾಣ್ ಮದುವೆ ವಿಚಾರ:

ಪವನ್ ಕಲ್ಯಾಣ್ ಅವರು 1997ರಲ್ಲಿ ನಂದಿನಿ ಹೆಸರಿನ ಯುವತಿಯನ್ನು ವಿವಾಹ ಆದರು. ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿತ್ತು. ಆದರೆ, ಇವರ ಸಂಬಂಧ ಹೆಚ್ಚು ವರ್ಷ ಉಳಿಯಲಿಲ್ಲ. 2007ರಲ್ಲಿ ಇಬ್ಬರೂ ಡಿವೋರ್ಸ್​ ಪಡೆದರು. ರೇಣು ದೇಸಾಯಿ ಅವರನ್ನು 2008ರಲ್ಲಿ ಪವನ್ ಕಲ್ಯಾಣ್ ವಿವಾಹ ಆದರು. ಈ ಸಂಬಂಧ ಕೂಡ ಮುಂದುವರಿಯಲಿಲ್ಲ. ರೇಣು ದೇಸಾಯಿ ಜೊತೆ ಡಿವೋರ್ಸ್ ಪಡೆದ ಬಳಿಕ ಪವನ್ ಕಲ್ಯಾಣ್ ಅನ್ನಾ ಜೊತೆ ವಿವಾಹ ಆದರು. ಕಳೆದ 10 ವರ್ಷಗಳಿಂದ ಇವರು ಸುಖ ಸಂಸಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಗದ್ದರ್ ನಿಧನಕ್ಕೆ ಕಂಬನಿ ಮಿಡಿದ ಪವನ್ ಕಲ್ಯಾಣ್: ಕುಟುಂಬಕ್ಕೆ ಸಾಂತ್ವನ

ಸಿನಿಮಾ ವಿಚಾರಕ್ಕೆ ಬರೋದಾದರೆ ಕೆಲವು ಸಿನಿಮಾ ಕೆಲಸಗಳಲ್ಲಿ ಪವನ್ ಕಲ್ಯಾಣ್ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಬ್ರೋ’ ಸಿನಿಮಾ ರಿಲೀಸ್ ಆಯಿತು. ಸಾಯಿ ಧರಮ್ ತೇಜ್ ಮುಖ್ಯಭೂಮಿಕೆ ನಿರ್ವಹಿಸಿದ್ದರು. ‘ಒಜಿ’, ‘ಹರಿ ಹರ ವೀರ ಮಲ್ಲು’, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಕೂಡ ಅವರು ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ