ಪವನ್ ಕಲ್ಯಾಣ್ ಕುರಿತು ವೆಬ್ ಸರಣಿ: ಮನವಿ ಮಾಡಿದ ಪವನ್​ ಮಾಜಿ ಪತ್ನಿ

Pawan Kalyan: ನಟ ಪವನ್ ಕಲ್ಯಾಣ್ ರ ಮಾಜಿ ಪತ್ನಿ ರೇಣು ದೇಸಾಯಿ ಆಂಧ್ರ ಜನತೆ ಹಾಗೂ ಪವನ್​ರ ರಾಜಕೀಯ ವಿರೋಧಿಗಳ ಬಳಿ ಮನವಿಯೊಂದನ್ನು ಮಾಡಿದ್ದಾರೆ.

ಪವನ್ ಕಲ್ಯಾಣ್ ಕುರಿತು ವೆಬ್ ಸರಣಿ: ಮನವಿ ಮಾಡಿದ ಪವನ್​ ಮಾಜಿ ಪತ್ನಿ
ಪವನ್ ಕಲ್ಯಾಣ್-ರೇಣು ದೇಸಾಯಿ
Follow us
ಮಂಜುನಾಥ ಸಿ.
|

Updated on: Aug 10, 2023 | 8:51 PM

ಆಂಧ್ರ ರಾಜಕೀಯ (Andhra Politics) ಹಾಗೂ ಸಿನಿಮಾ ರಂಗ (Movie Industry) ಮೊದಲಿನಿಂದಲೂ ಬಹಳ ಹತ್ತಿರ. ಈಗಂತೂ ಸಿನಿಮಾಗಳನ್ನೇ ರಾಜಕೀಯ ದಾಳಗಳನ್ನಾಗಿ ಬಳಸುವ ಪದ್ಧತಿ ತೆಲುಗು ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಇತ್ತೀಚೆಗೆ ಪವನ್ ಕಲ್ಯಾಣ್​ರ (Pawan Kalyan) ‘ಬ್ರೋ‘ (Bro) ಸಿನಿಮಾ ಬಿಡುಗಡೆ ಆಯ್ತು, ಸಿನಿಮಾದ ದೃಶ್ಯವೊಂದರಲ್ಲಿ ಆಂಧ್ರ ಮಂತ್ರಿ ಅಂಬಾಟಿ ರಾಮ್​ಬಾಬು ಅವರನ್ನು ಹೋಲುವ ಪಾತ್ರವೊಂದನ್ನು ಸೃಷ್ಟಿಸಲಾಗಿದೆ ಎಂಬ ಆರೋಪವನ್ನು ಆಡಳಿತ ಪಕ್ಷದವರು ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿದ್ದ ಸಚಿವ ಅಂಬಾಟಿ ರಾಮ್​ಬಾಬು, ತಾವು ಪವನ್ ಕಲ್ಯಾಣ್ ಬಗ್ಗೆ ವೆಬ್ ಸರಣಿ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದ್ದಲ್ಲದೆ, ಕೆಲವು ಹೆಸರುಗಳನ್ನು ಸಹ ಬಿಡುಗಡೆ ಮಾಡಿದ್ದರು.

ಅದಕ್ಕೆ ಪ್ರತಿಯಾಗಿ ಪವನ್ ಕಲ್ಯಾಣ್​ರ ಜನಸೇನಾ ಪಕ್ಷದವರು ತಾವು ಆಂಧ್ರ ಸಿಎಂ ಜಗನ್ ಜೀವನ ಕುರಿತಾಗಿ ವೆಬ್ ಸರಣಿ ನಿರ್ಮಾಣ ಮಾಡುವುದಾಗಿ ಹೇಳಿ ಕೆಲವು ಹೆಸರುಗಳನ್ನು, ಪೊಸ್ಟರ್​ಗಳನ್ನು ಬಿಡುಗಡೆ ಮಾಡಿದ್ದರು. ಪವನ್​ ಬಗ್ಗೆ ವೆಬ್ ಸರಣಿ ನಿರ್ಮಾಣ ಮಾಡುವುದಾಗಿ ಹೇಳಿದ್ದ ಅಂಬಾಟಿ ರಾಮ್​ಬಾಬು, ಪವನ್​ರ ಮೂರು ಮದುವೆ, ವೈವಾಹಿಕ ಜೀವನದ ಅನಿಶ್ಚಿತತೆ ವಿಷಯವನ್ನೇ ಮೂಲವನ್ನಾಗಿ ಇರಿಸಿಕೊಂಡು ವೆಬ್ ಸರಣಿ ನಿರ್ಮಾಣ ಮಾಡುವುದಾಗಿ ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ಪವನ್ ಕಲ್ಯಾಣ್​ರ ಮಾಜಿ ಪತ್ನಿ, ನಟಿ ರೇಣು ದೇಸಾಯಿ, ”ನನ್ನ ಮಾಜಿ ಪತಿಯ ರಾಜಕೀಯ ವಿರೋಧಿಗಳು ಕೆಲವರು ಅವರ ಖಾಸಗಿ ಜೀವನ, ಮೂರು ಮದುವೆ ಮಕ್ಕಳ ಬಗ್ಗೆ ವೆಬ್ ಸರಣಿ ಮಾಡುವುದಾಗಿ ಹೇಳಿದ್ದಾರೆ. ನಾನೊಬ್ಬ ತಾಯಿಯಾಗಿ ಅವರಿಗೆ ಮನವಿ ಮಾಡುತ್ತಿದ್ದೇನೆ, ನಿಮ್ಮ ರಾಜಕೀಯ, ವೈಯಕ್ತಿಕ ದ್ವೇಷಗಳನ್ನು ನೀವು ಮುಂದುವರೆಸಿಕೊಳ್ಳಿ ಆದರೆ ನಿಮ್ಮ ದ್ವೇಷಗಳಿಗೆ ಮಕ್ಕಳನ್ನು ಎಳೆದು ತರಬೇಡಿ, ಅವರು ಸ್ಟಾರ್ ನಟ, ರಾಜಕಾರಣಿಯ ಮಕ್ಕಳೇ ಆಗಿರಬಹುದು ಆದರೆ ಅವರಿನ್ನೂ ಮಕ್ಕಳು ಎಂಬುದನ್ನು ಮರೆಯಬೇಡಿ. ನನ್ನ ಮಕ್ಕಳು ಮಾತ್ರವೇ ಅಲ್ಲ ಬೇರೆ ಇನ್ಯಾವುದೇ ಸೆಲೆಬ್ರಿಟಿಗಳ ಮಕ್ಕಳ ವಿಷಯವನ್ನೂ ರಾಜಕೀಯಕ್ಕೆ ಎಳೆಯಬೇಡಿ” ಎಂದಿದ್ದಾರೆ.

ಇದನ್ನೂ ಓದಿ:Pawan Kalyan: ಚಿತ್ರಮಂದಿರದಲ್ಲಿ ದಾಂಧಲೆ, ಪವನ್ ಕಲ್ಯಾಣ್ ಅಭಿಮಾನಿಗಳ ಬಂಧನ

”ನಾನು ಅವರಿಂದ (ಪವನ್ ಕಲ್ಯಾಣ್) ನೋವುಂಡಿದ್ದೇನೆ ಆದರೆ ನಾನು ಆರಂಭದ ದಿನದಿಂದಲೂ ಪವನ್ ಕಲ್ಯಾಣ್​ರ ರಾಜಕೀಯ ಪಯಣಕ್ಕೆ ಬೆಂಬಲ ಸೂಚಿಸುತ್ತಲೇ ಬಂದಿದ್ದೇನೆ. ಹೌದು ಇದು ತುಸು ವಿಚಿತ್ರ ಎನಿಸಬಹುದು, ಅವರಿಂದ ನೊಂದವಳಾಗಿದ್ದರೂ ಸಹ ಅವರಿಗೆ ಜನಗಳ ಮೇಲಿರುವ ಪ್ರೀತಿಯನ್ನು ಸುಳ್ಳು ಎನ್ನುವುದಾಗಲಿ ನಿರಾಕರಿಸುವುದಾಗಲಿ ಸಾಧ್ಯವಿಲ್ಲ, ಅವರಿಗೆ ಹಣದ ಬಗ್ಗೆ ಯೋಚನೆ ಇಲ್ಲ, ಆದರೆ ಜನರ ಬಗ್ಗೆ ಬಹಳ ಪ್ರೀತಿ, ಗೌರವ ಇದೆ. ಸಮಾಜವನ್ನು, ಜನರ ಜೀವನವನ್ನು ಬದಲಿಸಬೇಕು ಎಂಬ ದೊಡ್ಡ ಹಪಹಪಿ ಅವರಿಗೆ ಇದೆ ಅದನ್ನು ನಾನು ಹತ್ತಿರದಿಂದ ನೋಡಿದ್ದೇನೆ” ಎಂದಿದ್ದಾರೆ ರೇಣು ದೇಸಾಯಿ.

”ಪವನ್​ರ ರಾಜಕೀಯ ವಿರೋಧಿಗಳು ಅವರ ಮೂರು ಮದುವೆ ಬಗ್ಗೆ ಮಾತನಾಡಬಹುದು, ನಾನೂ ಸಹ ಅವರಿಂದ ನೊಂದವಳೆ ಆದರೆ ಆ ಘಟನೆಗಳು ನಡೆದು 11 ವರ್ಷವಾಯಿತು. ಅವರಿಗೆ ಸಮಾಜದ ಬಗ್ಗೆ ಇರುವ ಬದ್ಧತೆಯ ಬಗ್ಗೆ ಅನುಮಾನವೇ ಇಲ್ಲ. ಅವರೊಬ್ಬ ಸೂಪರ್ ಸ್ಟಾರ್ ನಟ ನಟನೆಯನ್ನು ಮುಂದುವರೆಸಿಕೊಂಡು ಹೋದರೆ ಕೋಟ್ಯಂತರ ಹಣ ಗಳಿಸುತ್ತಾರೆ, ಆದರೆ ಆರಾಮವಾದ ಆ ಜೀವನ ಬಿಟ್ಟು ರಾಜಕೀಯಕ್ಕೆ ಧುಮುಕಿದ್ದಾರೆ. ಈ ನಾಡಿನ ಪ್ರಜೆಯಾಗಿ ಅವರನ್ನು ನಾನು ಬೆಂಬಲಿಸುವ ನಿರ್ಣಯ ಮಾಡಿದ್ದೇನೆ. ಅವರ ವೈಯಕ್ತಿಕ ಜೀವನದ ವಿಷಯ ಬದಿಗಿಟ್ಟು ಅವರಿಗೆ ಸಮಾಜದ ಬಗ್ಗೆ ಇರುವ ಬದ್ಧತೆಯನ್ನು ಮಾತ್ರವೇ ನೋಡಿ ಬೆಂಬಲಿಸಿ” ಎಂದು ರೇಣು ದೇಸಾಯಿ ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್