Pawan Kalyan: ಚಿತ್ರಮಂದಿರದಲ್ಲಿ ದಾಂಧಲೆ, ಪವನ್ ಕಲ್ಯಾಣ್ ಅಭಿಮಾನಿಗಳ ಬಂಧನ

Bro: ಪವನ್ ಕಲ್ಯಾಣ್​ರ 'ಬ್ರೋ' ಸಿನಿಮಾ ವೀಕ್ಷಣೆ ವೇಳೆ ಚಿತ್ರಮಂದಿರಕ್ಕೆ ಹಾನಿ ಮಾಡಿದ ಆರೋಪದಲ್ಲಿ ಪವನ್​ ಕಲ್ಯಾಣ್​ರ ಅಭಿಮಾನಿಗಳನ್ನು ಬಂಧಿಸಲಾಗಿದೆ.

Pawan Kalyan: ಚಿತ್ರಮಂದಿರದಲ್ಲಿ ದಾಂಧಲೆ, ಪವನ್ ಕಲ್ಯಾಣ್ ಅಭಿಮಾನಿಗಳ ಬಂಧನ
ಪವನ್ ಕಲ್ಯಾಣ್
Follow us
ಮಂಜುನಾಥ ಸಿ.
|

Updated on: Jul 30, 2023 | 4:41 PM

ನಟ ಪವನ್ ಕಲ್ಯಾಣ್ (Pawan Kalyan) ತೆಲುಗು ಚಿತ್ರರಂಗದಲ್ಲಿ (Tollywood) ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಗ್ರಗಣ್ಯರು. ಪವನ್ ರೀತಿಯಲ್ಲಿಯೇ ಅವರ ಅಭಿಮಾನಿಗಳು ಸಹ ತುಸು ಕ್ರೇಜಿ. ಪವನ್ ಕಲ್ಯಾಣ್ ರಾಜಕೀಯಕ್ಕೆ ಬಂದ ಬಳಿಕವಂತೂ ಪವನ್​ರ ಅಭಿಮಾನಿಗಳು ಮನೊರಂಜನೆ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಮೆಚ್ಚಿನ ನಟನನ್ನು ಬೆಂಬಲಿಸುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್​ರ ‘ಬ್ರೋ‘ (BRO) ಸಿನಿಮಾ ಬಿಡುಗಡೆ ಆಗಿದ್ದು, ಯಥಾವತ್ತು ಪವನ್​ರ ಅಭಿಮಾನಿಗಳು ಚಿತ್ರಮಂದಿರದಲ್ಲಿ ಹುಚ್ಚು ಅಭಿಮಾನ ಪ್ರದರ್ಶಿಸಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಆಂಧ್ರ ಪ್ರದೇಶದ ಪಾರ್ವತಿಪುರಂನ ಸಂಧ್ಯಾ ಚಿತ್ರಮಂದಿರದಲ್ಲಿ ಪವನ್ ಕಲ್ಯಾಣ್​ರ ಅಭಿಮಾನಿಗಳು ‘ಬ್ರೋ’ ಸಿನಿಮಾ ಪ್ರದರ್ಶನದ ವೇಳೆ ಸಿನಿಮಾದ ಸ್ಕ್ರೀನ್​ಗೆ ಹಾಲಿನ ಅಭಿಷೇಕ ಮಾಡಿ ಸ್ಕ್ರೀನ್ ಅನ್ನು ಹಾಳುಗೆಡವಿದ್ದಾರೆ. ಚಿತ್ರಮಂದಿರದ ಸ್ಕ್ರೀನ್ ಅನ್ನು ಹಾಳು ಮಾಡಿದ ಕಾರಣ ಚಿತ್ರಮಂದಿರದ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಪವನ್ ಕಲ್ಯಾಣ್​ರ ಕೆಲವು ಕಿಡಿಗೇಡಿ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪವನ್ ಕಲ್ಯಾಣ್ ಅಭಿಮಾನಿಗಳಿಂದ ಚಿತ್ರಮಂದಿರಗಳಿಗೆ ಹಾನಿ ಆಗುತ್ತಿರುವುದು ಇದು ಮೊದಲೇನೂ ಅಲ್ಲ. ವರ್ಷದ ಹಿಂದೆ ಪವನ್​ರ ಕಮ್​ಬ್ಯಾಕ್ ಸಿನಿಮಾ ‘ವಕೀಲ್ ಸಾಬ್’ ಬಿಡುಗಡೆ ಆದಾಗಲೂ ಆಂಧ್ರ ಹಾಗೂ ತೆಲಂಗಾಣದಲ್ಲಿ ಪವನ್ ಅಭಿಮಾನಿಗಳು ಅಬ್ಬರ ಎಬ್ಬಿಸಿದ್ದರು. ಆಂಧ್ರದಲ್ಲಿ ಸಿನಿಮಾದ ಬಿಡುಗಡೆಗೆ ಸರ್ಕಾರ ಸಮಸ್ಯೆಗಳನ್ನು ಮಾಡಿದಾಗಲಂತೂ ಹಲವು ಚಿತ್ರಮಂದಿರಗಳನ್ನು ಪವನ್ ಅಭಿಮಾನಿಗಳು ಜಖಂ ಮಾಡಿದ್ದರು.

ಇದನ್ನೂ ಓದಿ:ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದ ‘ಬ್ರೋ’: ಪವನ್ ಕ್ರೇಜ್ ತಗ್ಗಿಲ್ಲ

ಕೆಲವು ದಿನಗಳ ಹಿಂದೆ ಪವನ್​ರ ಸೂಪರ್ ಹಿಟ್ ಸಿನಿಮಾ ‘ಖುಷಿ’ ಮರು ಬಿಡುಗಡೆ ಆದಾಗಲೂ ಸಹ ಹಲವು ಚಿತ್ರಮಂದಿರಗಳಲ್ಲಿ ಪವನ್ ಅಭಿಮಾನಿಗಳು ದಾಂಧಲೆ ಮಾಡಿದ್ದರು. ಚಿತ್ರಮಂದಿರದಲ್ಲಿ ಬೆಂಕಿ ಹಚ್ಚಿ, ಸೀಟುಗಳನ್ನು ಕಿತ್ತು, ಸ್ಕ್ರೀನ್​ಗೆ ಹಾಲಿನ ಅಭಿಷೇಕಗಳನ್ನು ಮಾಡಿದ್ದರು. ಆ ಸಮಯದಲ್ಲಿ ಸಹ ಚಿರಾಲದ ಶಾಂತಿ ಚಿತ್ರಮಂದಿರದಲ್ಲಿ ಪವನ್​ ಕಲ್ಯಾಣ್​ರ ಎಂಟು ಮಂದಿ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದರು.

ಪವನ್​ ಕಲ್ಯಾಣ್​ಗೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಸಿನಿಮಾ ಬಿಡುಗಡೆ ಆದಾಗಲೆಲ್ಲ ಅಭಿಮಾನಿಗಳು ಹೀಗೆ ದಾಂಧಲೆ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ಇದೀಗ ಪವನ್ ಕಲ್ಯಾಣ್​ರ ‘ಬ್ರೋ’ ಸಿನಿಮಾ ಬಿಡುಗಡೆ ಆಗಿದೆ. ಬಿಡುಗಡೆ ಆದ ಮೊದಲ ದಿನವೇ ಸುಮಾರು 37 ಕೋಟಿ ರೂಪಾಯಿಗಳನ್ನು ‘ಬ್ರೋ’ ಸಿನಿಮಾ ಬಾಚಿಕೊಂಡಿದೆ. ಆದಷ್ಟು ಬೇಗ 100 ಕೋಟಿ ಹಣವನ್ನು ಈ ಸಿನಿಮಾ ಬಾಚುವ ನಿರೀಕ್ಷೆ ಇದೆ.

‘ಬ್ರೋ’ ಸಿನಿಮಾದಲ್ಲಿ ಪವನ್ ಕಲ್ಯಾಣ್​ ಹಾಗೂ ಸಾಯಿ ಧರಮ್ ತೇಜ್ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾವು ತಮಿಳು ಸಿನಿಮಾದ ರೀಮೇಕ್ ಆಗಿದೆ. ಮೂಲ ಸಿನಿಮಾವನ್ನು ನಿರ್ದೇಶಿಸಿದ್ದ ಸಮುದ್ರಕಿಣಿ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ ಸಹ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಯಶಸ್ವಿಯಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ