Ranveer Singh: 2ನೇ ದಿನ ಚೇತರಿಕೆ ಕಂಡ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಬಾಕ್ಸ್ ಆಫೀಸ್ ಗಳಿಕೆ
Rocky Aur Rani Ki Prem Kahani Collection: ರಣವೀರ್ ಸಿಂಗ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಒಂದು ಡಿಫರೆಂಟ್ ಆದಂತಹ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಆಲಿಯಾ ಭಟ್ ನಟಿಸಿದ್ದಾರೆ.
ನಟ ರಣವೀರ್ ಸಿಂಗ್ (Ranveer Singh) ಅವರು ಒಂದು ಗೆಲುವಿಗಾಗಿ ಕಾದಿದ್ದರು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Ki Prem Kahani) ಸಿನಿಮಾ ಮೂಲಕ ಆ ಗೆಲುವು ಸಿಗುವ ಸಾಧ್ಯತೆ ದಟ್ಟವಾಗಿದೆ. ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿಯಾಗಿ ನಟಿಸಿರುವ ಈ ಸಿನಿಮಾಗೆ ಉತ್ತಮವಾಗಿ ಕಲೆಕ್ಷನ್ ಆಗುತ್ತಿದೆ. ವೀಕೆಂಡ್ನಲ್ಲಿ ಈ ಸಿನಿಮಾ ಅಬ್ಬರಿಸುತ್ತಿದೆ. ಕರಣ್ ಜೋಹರ್ ಅವರು ನಿರ್ದೇಶನ ಮಾಡಿರುವ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳಲ್ಲಿ ನಿರೀಕ್ಷೆ ಮನೆ ಮಾಡಿತ್ತು. ಮೊದಲ ದಿನ ಸಾಧಾರಣ ಗಳಿಕೆ ಆಗಿದ್ದರೂ ಕೂಡ 2ನೇ ದಿನಕ್ಕೆ ಬಾಕ್ಸ್ ಆಫೀಸ್ನಲ್ಲಿ ಚೇತರಿಕೆ ಕಾಣಿಸಿದೆ. ಹಾಗಾಗಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ (Alia Bhatt) ಮುಖದಲ್ಲಿ ನಗು ಮೂಡಿದೆ. ಕೆಲವು ತಿಂಗಳಿಂದ ಸೊರಗಿದ್ದ ಬಾಲಿವುಡ್ ಬಾಕ್ಸ್ ಆಫೀಸ್ಗೆ ಹೊಸ ಚೈತನ್ಯ ಬಂದಂತೆ ಆಗಿದೆ.
ಜುಲೈ 28ರಂದು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಬಿಡುಗಡೆ ಆಯಿತು. ಬಾಲಿವುಡ್ನ ಸ್ಟಾರ್ ನಟರ ಸಿನಿಮಾ ಎಂದರೆ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಳ್ಳಬೇಕು. ಆದರೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಆ ನಿರೀಕ್ಷೆಯ ಮಟ್ಟವನ್ನು ತಲುಪಲಿಲ್ಲ. ಮೊದಲ ದಿನ ಈ ಚಿತ್ರ ಗಳಿಸಿದ್ದು 11 ಕೋಟಿ ರೂಪಾಯಿ. ಆದರೆ ಎರಡನೇ ದಿನವಾದ ಶನಿವಾರ ಗಳಿಕೆಯಲ್ಲಿ ಏರಿಕೆ ಕಂಡಿದೆ. ಜುಲೈ 29ರಂದು ಈ ಸಿನಿಮಾ 16.05 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡು ದಿನಕ್ಕೆ 27.15 ಕೋಟಿ ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗುತ್ತದೆ ಎಂಬುದನ್ನು ಕಾದುನೋಡಬೇಕು.
ರಣವೀರ್ ಸಿಂಗ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಒಂದು ಡಿಫರೆಂಟ್ ಆದಂತಹ ಪಾತ್ರ ಮಾಡಿದ್ದಾರೆ. ಈ ಹಿಂದೆ ‘ಗಲ್ಲಿ ಬಾಯ್’ ಸಿನಿಮಾದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರು ಜೋಡಿಯಾಗಿ ನಟಿಸಿದ್ದರು. ಈಗ ಅವರಿಬ್ಬರು ಮತ್ತೆ ತೆರೆ ಹಂಚಿಕೊಂಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಅನೇಕ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಫ್ಯಾಮಿಲಿ ಕಥಾಹಂದರ ಈ ಸಿನಿಮಾದಲ್ಲಿದೆ.
#RockyAurRaniKiiPremKahaani witnesses a super 44.59% growth on Day 2… Major centres [#Mumbai, #Delhi, #NCR, #Bengaluru, #Pune, #Hyderabad] continue to dominate ???, while Tier 2 centres also witness substantial growth… Fri 11.10 cr, Sat 16.05 cr. Total: ₹ 27.15 cr. #India… pic.twitter.com/ajJPoaMl9i
— taran adarsh (@taran_adarsh) July 30, 2023
ದೇಶಾದ್ಯಂತ ರಣವೀರ್ ಸಿಂಗ್ ಅವರಿಗೆ ಅಭಿಮಾನಿಗಳು ಇದ್ದಾರೆ. ಹಾಗಾಗಿ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಭಾನುವಾರದ ಕಲೆಕ್ಷನ್ ಲೆಕ್ಕ ಇನ್ನಷ್ಟೇ ಸಿಗಬೇಕಿದೆ. ಸೋಮವಾರದ ಬಳಿಕ ಸಿನಿಮಾಗೆ ಅಸಲಿ ಅಗ್ನಿ ಪರೀಕ್ಷೆ ಶುರುವಾಗಲಿದೆ. ವಾರದ ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದರ ಆಧಾರದ ಮೇಲೆ ಈ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.