AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranveer Singh: ‘ಸುಮ್ಮನೆ ಇರು, ಚಪ್ಪಲಿ ಏಟು ತಿಂತೀಯ’: ದೀಪಿಕಾ ಜೊತೆ ಸಿನಿಮಾ ನೋಡಲು ಬಂದ ರಣವೀರ್​ ಸಿಂಗ್​ಗೆ ಈ ಪರಿಸ್ಥಿತಿ ಯಾಕೆ?

Deepika Padukone: ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರ ನೋಡಿದ ಬಳಿಕ ದೀಪಿಕಾ ಪಡುಕೋಣೆಯ ಪ್ರತಿಕ್ರಿಯೆ ಹೇಗಿರಬಹುದು ಎಂಬ ಪ್ರಶ್ನೆ ರಣವೀರ್​ ಸಿಂಗ್​ಗೆ ಮೂಡಿದೆ. ಅದನ್ನು ಅವರು ಜನರ ಮುಂದಿಟ್ಟಿದ್ದಾರೆ.

Ranveer Singh: ‘ಸುಮ್ಮನೆ ಇರು, ಚಪ್ಪಲಿ ಏಟು ತಿಂತೀಯ’: ದೀಪಿಕಾ ಜೊತೆ ಸಿನಿಮಾ ನೋಡಲು ಬಂದ ರಣವೀರ್​ ಸಿಂಗ್​ಗೆ ಈ ಪರಿಸ್ಥಿತಿ ಯಾಕೆ?
ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ, ಆಲಿಯಾ ಭಟ್​
ಮದನ್​ ಕುಮಾರ್​
|

Updated on: Jul 30, 2023 | 8:22 AM

Share

ನಟ ರಣವೀರ್​ ಸಿಂಗ್​ (Ranveer Singh) ಅವರು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಿದೆ. ಈ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಆದರೆ ಅದನ್ನು ರಣವೀರ್​ ಸಿಂಗ್​ ಪತ್ನಿ ದೀಪಿಕಾ ಪಡುಕೋಣೆ (Deepika Padukone) ಮಿಸ್​ ಮಾಡಿಕೊಂಡಿದ್ದರು. ಹಾಗಾಗಿ ಪತ್ನಿಯನ್ನು ವೀಕೆಂಡ್​ನಲ್ಲಿ ರಣವೀರ್ ಸಿಂಗ್​ ಅವರು ಸಿನಿಮಾಗೆ ಕರೆದುಕೊಂಡು ಹೋಗಿದ್ದಾರೆ. ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ (Rocky Aur Rani Ki Prem Kahani) ಸಿನಿಮಾ ನೋಡಿದ ಬಳಿಕ ದೀಪಿಕಾ ಪಡುಕೋಣೆಯ ಪ್ರತಿಕ್ರಿಯೆ ಹೇಗಿರಬಹುದು ಎಂಬ ಪ್ರಶ್ನೆ ರಣವೀರ್​ ಸಿಂಗ್​ಗೆ ಮೂಡಿದೆ. ಅದನ್ನು ಅವರು ಜನರ ಮುಂದಿಟ್ಟಿದ್ದಾರೆ ಹಾಗೂ ಮೂರು ಆಯ್ಕೆ ನೀಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಹಂಚಿಕೊಂಡ ಈ ಫನ್ನಿ ಪಶ್ನೆ ವೈರಲ್​ ಆಗಿದೆ.

  • ‘ಆಕೆಯನ್ನು ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಸಿನಿಮಾ ತೋರಿಸಲು ಕರೆದುಕೊಂಡು ಹೋಗುತ್ತಿದ್ದೇನೆ’ 1. ಆಕೆಗೆ ಇಷ್ಟ ಆಗುತ್ತದೆ. 2. ಆಕೆಗೆ ತುಂಬಾ ಇಷ್ಟ ಆಗುತ್ತದೆ. 3. ಸುಮ್ಮನೆ ಇರು, ಚಪ್ಪಲಿ ಏಟು ತಿಂತೀಯ

ಹೀಗೆ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ರಣವೀರ್​ ಸಿಂಗ್​ ಅವರು ಪೋಸ್ಟ್​ ಮಾಡಿದ್ದಾರೆ. ಲಕ್ಷಾಂತರ ಜನರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಭಾನುವಾರ (ಜುಲೈ 30) ಬೆಳಗ್ಗೆ 7.50ರ ವೇಳೆಗೆ ಶೇಕಡ 28ರಷ್ಟು ಜನರು ‘ಆಕೆಗೆ ಇಷ್ಟ ಆಗುತ್ತದೆ’ ಎಂಬ ಆಯ್ಕೆಯನ್ನು ಕ್ಲಿಕ್​ ಮಾಡಿದ್ದಾರೆ. ‘ಆಕೆಗೆ ತುಂಬಾ ಇಷ್ಟ ಆಗುತ್ತದೆ’ ಎಂದು ಶೇಕಡ 38ರಷ್ಟು ಜನರು ಹೇಳಿದ್ದಾರೆ. ‘ಸುಮ್ಮನೆ ಇರು, ಚಪ್ಪಲಿ ಏಟು ತಿಂತೀಯ’ ಎಂಬ ಆಯ್ಕೆಯನ್ನು ಶೇಕಡ 34ರಷ್ಟು ಮಂದಿ ಕ್ಲಿಕ್​ ಮಾಡಿದ್ದಾರೆ.

ಇದನ್ನೂ ಓದಿ: Kalki 2898 AD: ‘ಕಲ್ಕಿ 2898 ಎಡಿ’ ಅಲಿಯಾಸ್​ ‘ಪ್ರಾಜೆಕ್ಟ್​ ಕೆ’ ಚಿತ್ರದ ಪ್ರಚಾರ ಮಾಡಲು ದೀಪಿಕಾ ಪಡುಕೋಣೆ ನಕಾರ; ಮೂಡಿತು ಅನುಮಾನ

ಕರಣ್​ ಜೋಹರ್​ ಅವರ ನಿರ್ದೇಶನದಲ್ಲಿ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಮೂಡಿಬಂದಿದೆ. ರಣವೀರ್​ ಸಿಂಗ್​ಗೆ ಜೋಡಿಯಾಗಿ ಆಲಿಯಾ ಭಟ್​ ನಟಿಸಿದ್ದಾರೆ. ಬಾಲಿವುಡ್​ನ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಮೊದಲ ದಿನ ಭರ್ಜರಿ ಕಲೆಕ್ಷನ್​ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಕೇವಲ 11 ಕೋಟಿ ರೂಪಾಯಿ ಗಳಿಕೆ ಆಗಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ಕಿರುವುದರಿಂದ ವಾರದ ದಿನಗಳಲ್ಲಿ ಕಲೆಕ್ಷನ್​ ಕುಸಿಯುವ ಸಾಧ್ಯತೆ ಇದೆ. ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್ ಅವರು ‘ಗಲ್ಲಿ ಬಾಯ್​’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಈಗ ಅವರು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರದಲ್ಲಿ ಮತ್ತೊಮ್ಮೆ ತೆರೆ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ